Site icon PowerTV

ಹಿರಿಯ ನಾಯಕಿ ಮೋಟಮ್ಮರಿಗೆ ಡಿಕೆಶಿ ಅವಮಾನ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ ಎಂಬ ಗುಲ್ಲು ಇದೀಗ ಎಲ್ಲೆಡೆ ಹಬ್ಬಿದೆ. ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಪೆ ಸಾಧನೆ ಮಾಡಿದೆ ಹಾಗೂ ಅದಕ್ಕೆ ಮೋಟಮ್ಮನವರ ಕಳಪೆ ಸಾಧನೆಯೇ ಕಾರಣ ಎಂದು ಡಿಕೆಶಿ ಗರಂ ಆಗಿ ಅವರನ್ನು ಸಾರ್ವಜನಿಕರ ಎದುರೇ ಅವಮಾನಿಸಿದ ಘಟನೆ ನಡೆದಿದೆ.

ಡಿಜಿಟಲ್ ಸದಸ್ಯತ್ವದ ಕುರಿತು ಹಿರಿಯ ನಾಯಕಿ ಮೋಟಮ್ಮ ಸಮಜಾಯಿಷಿ ನೀಡಲು ಕಾರು ಬಳಿ ಬಂದು ಕ್ಷಮೆ ಕೇಳಿದರೂ, ಶಿವಕುಮಾರ್
ನೋ….ನೋ…. ಸಾರಿ… ಮಾತನಾಡಬೇಡಿ ಮೊದಲು ಮೆಂಬರ್‌ಶಿಪ್ ಎಂದಷ್ಟೇ ಹೇಳಿ ಕಾರು ಹತ್ತಿ ಹೊರಟುಹೋದರು. ಹೀಗೆ ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿಗೆ ಪ್ರತಿಕ್ರಿಯಿಸದೆ ಹೊರಟ ಡಿಕೆಶಿಯಿಂದಾಗಿ ಮೊಟಮ್ಮನವರಿಗೆ ಮುಖಭಂಗವಾದಂತಾಯಿತು. ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ.

Exit mobile version