Site icon PowerTV

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಚರ್ಚೆ; ಬಿ.ಸಿ.ನಾಗೇಶ್

ಬೆಂಗಳೂರು: ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ಕುರಿತು ಶಿಕ್ಷಣ ತಜ್ಷರ ಜೊತೆ ಚರ್ಚೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ. ಭಗವದ್ಗೀತೆಯ ಯಾವ ಭಾಗ ಪಠ್ಯದಲ್ಲಿ ಸೇರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಏಕೆಂದರೆ ಒಮ್ಮೆ ಬಿಜೆಪಿ ಸರ್ಕಾರ ಅಂದುಕೊಂಡರೆ ಅದನ್ನು ಮಾಡದೇ ಬಿಡುವುದಿಲ್ಲ.

ಆದರೆ ಇಲ್ಲಿ ಎದುರಾಗುವ ಮೂಲಭೂತ ಪ್ರಶ್ನೆಯೆಂದರೆ ತಿಂಗಳುಗಳಿಂದಲೂ ಹಿಜಾಬ್ ವಿಷಯವಾಗಿ ಶಾಲಾ ಕಾಜೇಲುಗಳಲ್ಲಿ ಹಿಜಾಬ್ ಧಾರಣೆಯಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ, ಒಂದು ಧರ್ಮದ ಆಚರಣೆಗೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯದವರೆಗೂ ಅದನ್ನು ಎಳೆದು, ಹಿಜಾಬ್ ನಿಶೇಧಿಸಿ ಸರ್ಕಾರದಿಂದ ಸುತ್ತೋಲೆ ಹೊರಡಿಸಿ.. ಹೀಗೆ ಹಿಜಾಬ್ ನಿಶೇಧಿಸಲು ಸರ್ಕಾರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯವೆ. ಇದರ ಮೂಲ ಉದ್ದೇಶ ಸರ್ಕಾರದ ಪ್ರಕಾರ ಶಾಲೆ ಕಾಲೇಜುಗಳಲ್ಲಿ ಧರ್ಮ ಪ್ರವೇಶಿಸಬಾರದು, ಅಲ್ಲಿ ಎಲ್ಲರೂ ಸಮಾನವಾಗಿರಬೇಕು ಎಂದು. ಆದರೆ ಈಗ ಅದೇ ಸರ್ಕಾರ ಮಾಡಲು ಹೊರಟಿರುವುದೇನು? ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಿದರೆ ಅದು ಒಂದು ಧರ್ಮದ ಅಂಶವನ್ನು ಶಾಲೆ ಕಾಲೇಜುಗಳಲ್ಲಿ ತಂದಂತಾಗುವುದಿಲ್ಲವೆ? ಹಾಗಾದರೆ ಭಗವದ್ಗೀತೆ ಜೊತೆ, ಕುರಾನ್, ಬೈಬಲ್​ಗಳನ್ನೂ ಸಹ ಪಠ್ಯದಲ್ಲಿ ಸೇರಿಸುತ್ತಾರೆಯೆ? ಶಿಕ್ಷಣ ಸಚಿವರು ಇದಕ್ಕೆ ಉತ್ತರಿಸುತ್ತಾರೆಯೆ?

Exit mobile version