Site icon PowerTV

ರಾಹುಲ್ ಪೂರ್ಣಪ್ರಮಾಣದ ಅಧ್ಯಕ್ಷರಾಗಲಿ-ಡಿಕೆಶಿ

ಪಂಚರಾಜ್ಯ ಚುನಾವಣೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕಿ ನೆನ್ನೆ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಆತ್ಮಾವಲೋಕನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವೆಂದರೆ ಅದು ಕಾಂಗ್ರೆಸ್​ಗೆ ಗಾಂಧಿ ಕುಟುಂಬ ಅತಿ ಅವಶ್ಯಕ ಎಂಬುದು.

ಹೌದು, ಕಾಂಗ್ರೆಸ್​ನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ರಾಜಾಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್​ರಿಂದ ಹಿಡಿದು ಕರ್ನಾಟಕದ ಮುಖಂಡ ಡಿ.ಕೆ.ಶಿವಕುಮಾರ್​ವರೆಗೂ ಎಲ್ಲರೂ ಕಾಂಗ್ರೆಸ್​ಗೆ ಗಾಂಧಿ ಕುಟುಂಬದ ಅವಶ್ಯಕತೆಯನ್ನು ಎತ್ತಿ ಹಿಡಿದರು. ಸೋನಿಯಾ ಗಾಂಧಿಯವರ ಮೇಲೆ ಕಾಂಗ್ರೆಸ್​ಗೆ ಸಂಪೂರ್ಣ ನಂಬಿಕೆಯಿದೆ. ಅವರ ಅಧ್ಯಕ್ಷತೆಯಲ್ಲಿಯೇ ನಾವು 2024ರ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಸುರ್ಜೇವಾಲ ಘೋಷಿಸಿದರೆ, ಕರ್ನಾಟಕದ ಡಿಕೆಶಿ ಟ್ವಿಟ್ ಮಾಡಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪೂರ್ಣ  ಪ್ರಮಾಣದ ಅಧ್ಯಕ್ಷರಾಗಬೇಕು. ಇದು ನಾನೂ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರ ಆಶಯ ಎಂದು ಟ್ವೀಟ್ ಮಾಡಿದ್ದಾರೆ.

Exit mobile version