Site icon PowerTV

ಡಿಕೆಶಿ ಗುಂಡಾಗಿರಿ‌ ಮಾಡಲು ತಯಾರಿ ಮಾಡಿದ್ರಾ..? : ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ತೋಳಬಳ ತೋರಿಸಲು, ಗುಂಡಾಗಿರಿ ಮಾಲಡಲು ಡಿಕೆಶಿ ಗೋವಾ ಹೋಗಿದ್ರಾ..? ಕೂಸು ಹುಟ್ಟುವ ಮುನ್ನೆ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಗೋವಾಗೆ ಯಾಕೆ ಹೋಗಿದ್ರು ಅನ್ನೋದು ಇನ್ನೂ ಅರ್ಥವಾಗಿಲ್ಲ.  ಫಲಿತಾಂಶ ಬರುವ ಮುನ್ನ ಗುಂಡಾಗಿರಿಗೆ ತಯಾರಿ ನಡೆಸಲು ಗೋವಾಗೆ ಹೋದ್ರಾ..? ಎಂದು ಗುಡುಗಿದ್ದಾರೆ. ಸ್ವಾತಂತ್ರ್ಯ ನಂತರದ ಕಾಂಗ್ರೆಸ್​ ವಿಸರ್ಜಿಸಿ ಅಂತ ಗಾಂದಿ ಹೇಳಿದ್ರು. ಅದನ್ನು ರಾಹುಲ್​ ಗಾಂಧಿ ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಇದು ಖುಷಿಯ ವಿಚಾರ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

Exit mobile version