Site icon PowerTV

ಸಿದ್ದುಗೆ ಲೇವಡಿ ಮಾಡಿದ ಶೆಟ್ಟರ್

ಹೆಬ್ಬಾಳ: ದೇಶದಲ್ಲಿ ಇಬ್ಬರು ಸಿದ್ಧು ಇದ್ದಾರೆ, ಒಬ್ಬ ಸಿದ್ದು ಪಂಜಾಬಿನಲ್ಲಿ ಕಾಂಗ್ರೆಸ್ ಹಾಳು ಮಾಡಿದ. ನಮ್ಮ ರಾಜ್ಯದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಅವನತಿಗೆ ತರುತ್ತಾರೆ ಎಂದು ಕಾಂಗ್ರೆಸ್​ ನಾಯಕರ ಬಗ್ಗೆ ಮಾಜಿ ಸಿಎಂ ಶೆಟ್ಟರ್​ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ , ಸಿದ್ಧರಾಮಯ್ಯ ಮತ್ತು ಡಿಕೆಶಿ ಬಣ ಬೇರೇ ಬೇರೆ ಇದೆ, ಈಗಾಗಲೇ ಅವರಲ್ಲೇ ಗುಂಪುಗಾರಿಕೆ ಆರಂಭವಾಗಿದೆ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತೆ ಅಂತಾ ಮೋದಿ ಹೇಳುತ್ತಿದ್ದರು, ಈಗ ಮೋದಿ ಅವರು ಹೇಳಿದ ಮಾತಿನಂತೆ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತಿದೆ ಎಂದು ಟೀಕಿಸಿದ್ದಾರೆ.

Exit mobile version