Site icon PowerTV

ಉತ್ತರಪ್ರದೇಶದ ಫಲಿತಾಂಶದ ಬಗ್ಗೆ ಏನು ಹೇಳುತ್ತದೆ ಎಕ್ಸಿಟ್ ಪೋಲ್?

ವಿವಿಧ ಟಿವಿ ಚಾನೆಲ್​​ಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಬಿಜೆಪಿ 262 ರಿಂದ 277 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಎಸ್ಪಿ ಮೈತ್ರಿಕೂಟ 119 ರಿಂದ 134 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ 3ರಿಂದ 4 ಸ್ಥಾನ ಪಡೆದರೆ, ಬಿಎಸ್​​ಪಿ 7ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಎಲ್ಲಾ ಸಮೀಕ್ಷೆಗಳು ಹೆಚ್ಚು ಕಡಿಮೆ ಇದೇ ರೀತಿ ಇದ್ದು, ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಲಾಗುತ್ತಿದೆ. ಅದೇ ರೀತಿ ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಸೀಟುಗಳನ್ನ ಕಳೆದುಕೊಳ್ಳುವುದು ಖಚಿತ ಎನ್ನುತ್ತಿವೆ ಎಕ್ಸಿಟ್ ಪೋಲ್​ಗಳು. ಆ ಮೂಲಕ ಪ್ರಿಯಾಂಕ ಗಾಂಧಿ ಮ್ಯಾಜಿಕ್ ನಡೆಯೋದು ಅನುಮಾನ ಎನ್ನುವಂತಾಗಿದೆ.
Flow..
ರಿಪಬ್ಲಿಕ್ ಪಿ-ಮಾರ್ಕ್ ಎಕ್ಸಿಟ್ ಪೋಲ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 403 ಸ್ಥಾನಗಳಲ್ಲಿ 240 ಸ್ಥಾನಗಳನ್ನು ಗೆಲ್ಲುತ್ತದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 140 ಸ್ಥಾನಗಳೊಂದಿಗೆ ಪ್ರಮುಖ ಪ್ರತಿಪಕ್ಷವಾಗಲಿದೆ. ರಾಹುಲ್ ಗಾಂಧಿ ಸೇರಿದಂತೆ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ನಾಯಕರು ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್​​ಗೆ ಉತ್ತರ ಪ್ರದೇಶದಲ್ಲಿ ಮತ್ತೆ ನಿರಾಸೆಯಾಗಲಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಪಡೆಯಲಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷ 17 ಸ್ಥಾನಗಳನ್ನು ಪಡೆಯಲಿದೆ. ಟೈಮ್ಸ್ ನೌ-ವೀಟೊ ಸಮೀಕ್ಷೆ ಕೂಡ ಯುಪಿಯಲ್ಲಿ ಬಿಜೆಪಿಗೆ 225 ಸ್ಥಾನಗಳೊಂದಿಗೆ ವಿಜಯವನ್ನ ಕೊಡುತ್ತಿದೆ. ಸಮಾಜವಾದಿ ಪಕ್ಷ 151 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ರೆ. ಒಂಬತ್ತು ಸ್ಥಾನಗಳ ನಿರೀಕ್ಷಿತ ವಾಪಸಾತಿಯೊಂದಿಗೆ ಕಾಂಗ್ರೆಸ್ ಮತ್ತೊಮ್ಮೆ ಸೊರಗಿದೆ. ಮಾಯಾವತಿ ಅವರ ಬಿಎಸ್​ಪಿ 14 ಸ್ಥಾನಗಳನ್ನು ಪಡೆಯಲಿದ್ದು, ನಾಲ್ಕು ಸ್ಥಾನಗಳನ್ನು ಇತರೆ ಪಕ್ಷಗಳು ಪಡೆದುಕೊಳ್ಳಲಿವೆ ಅಂತಾ ಸಮೀಕ್ಷೆಗಳು ಹೇಳಿವೆ.

Exit mobile version