Site icon PowerTV

ಉತ್ತರಾಖಂಡ್, ಮಣಿಪುರ: ರಾಷ್ಟ್ರೀಯ ಪಕ್ಷಗಳ ನುಡುವೆ ಅಧಿಕಾರಕ್ಕಾಗಿ ಪೈಪೋಟಿ

ಸಣ್ಣ ರಾಜ್ಯಗಳಾದ ಉತ್ತರಾಖಂಡ್ ಮತ್ತು ಮಣಿಪುರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಗೆಲುವಿನ ವಿಶ್ವಾದಲ್ಲಿವೆ. ಆದರೆ ಇಲ್ಲಿ ಎರಡೂ ಕಡೆ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲಿದೆ ಅಂತಾ ಕೆಲವು ಸಮೀಕ್ಷೆಗಳು ಹೇಳಿವೆ. ಹಾಗಾದ್ರೆ ಇಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಫಲಿತಾಂಶ ಹೇಗೆ ಬರಬಹುದು ಅನ್ನೋದನ್ನ ಅವಲೋಕಿಸೋಣ.. ಉತ್ತರಾಖಂಡದಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ, ನ್ಯೂಸ್24-ಟುಡೇಸ್ ಚಾಣಕ್ಯ ಮತ್ತು ಟೈಮ್ಸ್ ನೌ-ವೀಟೊ ಇವೆಲ್ಲವೂ ಬಿಜೆಪಿಗೆ ಪಟ್ಟ ಕಟ್ಟಿವೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ 36-46 ಸೀಟುಗಳನ್ನು, ಟೈಮ್ಸ್ ನೌ-ವೀಟೋ 37 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಘೋಷಿಸಿವೆ. ಆದರೆ ಇಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಮಣಿಪುರದಲ್ಲಿ, ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸುಲಭ ಜಯ ಸಿಗಲಿದೆ ಅಂತಾ ಎಕ್ಸಿಟ್ ಪೋಲ್ಸ್ ಹೇಳುತ್ತಿವೆ. ಬಿಜೆಪಿಗೆ 60 ಸ್ಥಾನಗಳಲ್ಲಿ 27-31 ಸ್ಥಾನ ಸಿಗುವ ಸಾಧ್ಯತೆಯಿದೆ. ಇದು ಬಹುಮತದ 31ಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ, ವಿರೋಧ ಪಕ್ಷ MPSA ಮೈತ್ರಿಯು ಕೇವಲ 11-17 ಸ್ಥಾನಗಳನ್ನು ಮತ್ತು NPP 6-10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇದು ಆಡಳಿತ ಪಕ್ಷಕ್ಕೆ ಮತದಾನದ ನಂತರದ ಒಪ್ಪಂದಗಳನ್ನು ರೂಪಿಸಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಇನ್ನೂ ಕೆಲವು ಎಕ್ಸಿಟ್ ಪೋಲ್​ಗಳು ಇಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಅಧಿಕಾರ ಸಿಗುವ ಸಾಧ್ಯತೆ ಇದೆ ಅಂತಾ ಹೇಳುತ್ತಿವೆ. ಎಕ್ಸಿಟ್ ಪೋಲ್​ಗಳ ಹೊರತಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧಿಕಾರ ಪಡೆಯಲು ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

Exit mobile version