Site icon PowerTV

ಕಾಂಗ್ರೆಸ್ ಮುಕ್ತ ಭಾರತಕ್ಕೆ ಇದು ಬುನಾದಿ : ಗೋವಿಂದ ಕಾರಜೋಳ

ಬೆಂಗಳೂರು:ಪಂಚರಾಜ್ಯ ಚುನಾವಣೆ ಫಲಿತಾಂಶ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರನ್ನ ಎತ್ತಿಕಟ್ಟಿದ್ರು,ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ.ಗೋವಾದಲ್ಲೂ ಜನ ಬಿಜೆಪಿಗೆ ಬೆಂಬಲಿಸಿದ್ದಾರೆ.ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಅವರು ಹಾಕಿಕೊಟ್ಟ ಕಾರ್ಯಕ್ರಮ ಜನ ಒಪ್ಪಿದ್ದಾರೆ. ಮುಂದೆಯು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತಮ ಕೆಲಸ ಮಾಡಿದಾಗ ನಾಯಕರನ್ನ ಜನ ಒಪ್ತಾರೆ.ಸಾಮಾಜಿಕ ಕಳಕಳಿಯಿಂದ ಪ್ರಧಾನಿ ಕೆಲಸ ಮಾಡಿದ್ದಾರೆ ಅದನ್ನ ಜನ ಒಪ್ಪಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Exit mobile version