Site icon PowerTV

MLA ಬಿಟ್ಟು ಕಾಮಗಾರಿಗೆ ಚಾಲನೆ ನೀಡಲು ಸುಮಲತಾ ಯತ್ನ; ಕಾರ್ಯಕರ್ತರಿಂದ ಗಲಾಟೆ

ಮೈಸೂರು: ಮಂಡ್ಯ ಸಂಸದೆಗೆ ಜೆಡಿಎಸ್ ಕಾರ್ಯಕರ್ತರಿಂದ ಮತ್ತೊಮ್ಮೆ ತಡೆಯೊಡ್ಡಿದ ಘಟನೆ ನಡೆದಿದೆ. ಎಂಎಲ್‌ಎ ಬಿಟ್ಟು ಕಾಮಗಾರಿಗೆ ಚಾಲನೆ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ಗುದ್ದಲಿ ಪೂಜೆ ನೆರವೇರಿಸಲು ಬಿಡದೆ ಗಲಾಟೆ ನಡೆಸಿದ್ದಾರೆ.

ಮೈಸೂರು ಜಿಲ್ಲೆ ಕೆ ಆರ್‌.ನಗರ ತಾಲೂಕು ಮುಂಜನಹಳ್ಳಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿದ್ದಾರೆ. ಅದು ಅಷ್ಟಕ್ಕೇ ನಿಲ್ಲದೆ ಮಾತಿಗೆ ಮಾತು ಬೆಳದು ಕೈ ಕೈ ಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ತಲುಪಿದೆ. ಶಾಮಿಯಾನ ಕಿತ್ತುಹಾಕಿದ ಎಂಎಲ್‌ಎ ಸಾ.ರಾ.ಮಹೇಶ್ ಬೆಂಬಲಿಗರು ಗಲಾಟೆ ಮಾಡಿದ್ದಾರೆ.

ಆದರೆಸ್ಥಳೀಯ ಮಹಿಳೆಯರು ತಾವೆ ಖುದ್ದು ನಿಂತು ಸಂಸದೆ ಕೈಯಲ್ಲಿ ಗುದ್ದಲಿಪೂಜೆ ಮಾಡಿಸಿದ್ದಾರೆ.
ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಸಂಸದೆ ಸುಮಲತ ತೆರಳಿದ್ದರು. ಇದನ್ನೆಲ್ಲ ನೋಡುತ್ತ
ಮೂಕ ಪ್ರೇಕ್ಷಕರಂತೆ ಪೊಲೀಸರು ನಿಂತಿದ್ದರೆನ್ನಲಾಗಿದೆ.

Exit mobile version