Site icon PowerTV

ಪಂಚರಾಜ್ಯ ಚುನಾವಣೆ ಸೋಲಿನಿಂದ ಕಾಂಗ್ರೆಸ್​​ ನಾಯಕತ್ವ ಬದಲಾಗಲ್ಲ : ಆರ್​​ ಧ್ರುವ ನಾರಾಯಣ್‌

ಮೈಸೂರು: ಈ ಫಲಿತಾಂಶದಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಅಗತ್ಯವಿಲ್ಲ ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಎಂದೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಕಾಂಗ್ರೆಸ್​​ ಮಾಜಿ ಸಂಸದ ಆರ್​​ ಧ್ರುವ ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‌ನ ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆಯಾಗುವುದಿಲ್ಲ ಹಾಗೂ ಅದರ ಅಗತ್ಯ ಕೂಡ ಇಲ್ಲ. ಅವರಿಗೆ ಅಧಿಕಾರದ ಯಾವುದೇ ಆಸೆಯಿಲ್ಲ. ರಾಹುಲ್‌ಗಾಂಧಿ ಬೇಕಿದ್ದರೆ ಉಪ ಪ್ರಧಾನಿ ಆಗಬಹುದಿತ್ತು. ಆದರೆ, ಅವರು ಆಗಿಲ್ಲ.

ಇನ್ನು ವಿನಾಕಾರಣ ಬಿಜೆಪಿಯವರು ನಮ್ಮ ಕಾಂಗ್ರೆಸ್​​ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗೂ ಮುಂದಿನ ಚುನಾವಣೆಯನ್ನೂ ನಾವು ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಸಲಿದ್ದೇವೆ ಎಂದು ಮೈಸೂರಿನಲ್ಲಿ ಆರ್​​ ಧ್ರುವ ನಾರಾಯಣ್‌ ಹೇಳಿದರು.

Exit mobile version