Site icon PowerTV

ಪಂಚರಾಜ್ಯ ಚುನಾವಣೆ: ಉತ್ತರಾಖಂಡದ ಇದುವರೆಗಿನ ಫಲಿತಾಂಶ

ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್ ನ ಇದುವರೆಗಿನ ಫಲಿತಾಂಶವನ್ನು ನೋಡುವುದಾದರೆ ಇಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಬಾರಿಯ ಚುನಾವಣೆಗೆ ಹೋಲಿಸುವುದಾದರೆ ಬಿಜೆಪಿ 13 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ.

ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಕಳೆದ ಬಾರಿಗಿಂತ 11 ಹೆಚ್ಚುವರಿ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಇವೆರಡೂ ಸ್ಥಾನಗಳು ಅದಕ್ಕೆ ಲಾಭವಾಗಿ ಬಂದವುಗಳಾಗಿವೆ. ಉತ್ತರಾಖಂಡ್​ನಲ್ಲಿ ಆಪ್ ಸೊನ್ನೆ ಸುತ್ತಿದರೆ, ಇತರರು 2 ಕಡೆ ಮುನ್ನಡೆಯಲ್ಲಿದ್ದಾರೆ.

ಕೊನೆಯ ಫಲಿತಾಂಶ ಬರುವವರೆಗೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಇದೇ ರೀತಿಯ ಮುನ್ನಡೆ ಕಾಯ್ದುಕೊಂಡು ಅಷ್ಟು ಸ್ಥಾನಗಳನ್ನು ಗೆದ್ದರೆ, ಆಗ ಬಿಜೆಪಿಗೆ ಉತ್ತರಾಖಂಡ ದಕ್ಕುತ್ತದೆ. ಏಕೆಂದರೆ ಮುನ್ನಡೆಯನ್ನು ಗಮನಿಸಿದರೆ ಅದಕ್ಕೆ ಈಗ ಬೇಕಿರುವ ಸರಳ ಬಹುಮತವಾದ 36 ಸ್ಥಾನಗಳು ಸಿಕ್ಕಿವೆಯೆಂಲೇ ಹೇಳಬಹುದು.

Exit mobile version