Site icon PowerTV

ಹಿಂದೆ ನಾಲ್ಕು ಕಡೆ ನಮ್ಮದೇ ಸರ್ಕಾರ; ಈಗಲೂ ನಮ್ಮದೇ ಸರ್ಕಾರ- ಕಟೀಲ್​​

ಬೆಂಗಳೂರು:ಹಿಂದೆ ನಾಲ್ಕೂ ಕಡೆ ನಮ್ಮದೇ ಸರ್ಕಾರ ಇತ್ತು, ಮತ್ತೆ ನಾಲ್ಕು ಕಡೆ ಅಧಿಕಾರಕ್ಕೆ ಬಂದಿದ್ದೇವೆ, ಪಂಜಾಬ್‌ನಲ್ಲಿ ಮೊದಲು ಕಾಂಗ್ರೆಸ್ ಇತ್ತು, ಇದೀಗ ಆಪ್ ಬಂದಿದೆ ಇದರಿಂದ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪಂಜಾಬ್​​ನಲ್ಲಿ ಆಪ್​​​ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನಗರದಲ್ಲಿಂದು ಮಾತನಾಡಿದ ಅವರು ಪಂಜಾಬ್‌ನಲ್ಲಿ ಮುಂಚೆ ಕಾಂಗ್ರೆಸ್ ಇತ್ತು, ಆದರೆ ಇದೀಗ ಆಮ್​​ ಆದ್ಮಿ ಪಾರ್ಟಿ ಬಂದಿದೆ. ಮೊದಲಿನಿಂದಲೂ ದೆಹಲಿಯಲ್ಲೇ ಸೀಮಿತವಾಗಿದ್ದ ಆಪ್ ನಿಧಾನವಾಗಿ ಮೇಲೆಳುತ್ತಿದೆ.ನಮ್ಮದು ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದ್ದು, ಇದರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.

ಇನ್ನು, ರೈತರ ಕಾಯಿದೆ ಬಿಜೆಪಿಗೆ ಮುಳುವಾಯ್ತಾ ಅನ್ನೋ ಪ್ರಶ್ನೆ.? ವಿಚಾರಕ್ಕೆ ಉತ್ತರಿಸಿ ರೈತರ ಪರವಾಗಿ ಬಿಜೆಪಿ ಪಕ್ಷ ಇದೆ.ರೈತರ ಪ್ರತಿಭಟನೆ ನಮಗೆ ಯಾವುದೇ ಹೊಡೆತ ನೀಡಿಲ್ಲ. ರೈತರೂ ಕೂಡ ನಮ್ಮ ಪರವಾಗಿ ಕೊನೆವರೆಗೂ ಇರಲಿದ್ದಾರೆಂದರು.

ಪಂಚರಾಜ್ಯ ಚುನಾವಣೆ ಬಿಜೆಪಿ ಜಯಭೇರಿ ಹಿನ್ನಲೆ ಮಾತನಾಡಿ ರಾಜ್ಯದಲ್ಲಿ ಸಂಪುಟ ಬದಲಾಗತ್ತಾ ಎನ್ನುವ ಪ್ರಶ್ನೆಗೆ ಹೌದು ಖಂಡಿತಾ ಬದಲಾಗತ್ತದೆ. ದೇಶದ ಅಭಿವೃದ್ಧಿ ಕಾರ್ಯವು ಇನ್ನಷ್ಟು ಚುರುಕು ಪಡೆಯತ್ತದೆ. ರಾಜ್ಯದಲ್ಲಿ ಸದ್ಯ ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಎಲ್ಲವೂ ಹೀಗೆ ಮುಂದುವರೆಯಲಿದೆ.

ರಾಮ ಮಂದಿರ ನಿರ್ಮಾಣ ಸಂಕಲ್ಪ, ಕಾಶಿ, ಭವ್ಯ ಕಾಶಿ ದಿವ್ಯ ಕಾಶಿ ನಿರ್ಮಾಣವಾಗಿದೆ. ಗಂಗಾ ಸ್ವಚ್ಚತೆ, ಗಂಗಾ ಪೂಜೆ ನಡುವೆ ಕಮಲ ಅರಳಿದೆ ಪರಿಪೂರ್ಣ ಆಶಿರ್ವಾದ ಜನತಾ ಪ್ರಭು ನೀಡಿದ್ದಾನೆ. ಉತ್ತರ ಖಾಂಡ್‌ನಲ್ಲಿ ಹೋಗುವಾಗ ಬ್ಯಾಗ್ ತುಂಬಿಸಿಕೊಂಡು, ಬರುವಾಗ ಖಾಲಿ ಮಾಡಿಕೊಂಡು ಬಂದಿದ್ದಾರೆ.ಮೋದಿ, ಜೆ.ಪಿ ನಡ್ಡಾ, ಕಾರ್ಯಕರ್ತರವರೆಗೂ ಒಂದಾಗಿ ದುಡಿದು ಶಕ್ತಿ ಗೆಲುವನ್ನ ತಂದು ಕೊಟ್ಟಿದೆ. ಬಹಳಷ್ಟು ಜನ ಡಬಲ್ ಇಂಜಿನ್ ಸರ್ಕಾರ ಅಂತ ಟೀಕೆ ಮಾಡ್ತ ಇದ್ದರು ಅದಕ್ಕೆ ಜನರು ಈಗ ಉತ್ತರ ನೀಡಿದ್ದಾರೆ. ವಿಪಕ್ಷದವರು ಪಾದಯಾತ್ರೆ ಕೂಡ ಮಾಡಿದ್ದಾರೆ ಆದರೆ ಪಾದಯಾತ್ರೆಯಿಂದ ನೀರು ಬರೋದಿಲ್ಲ ಜನರ ಆರ್ಶಿವಾದವು ಸಿಗುವುದಿಲ್ಲ ಆದರೆ ರಾಜ್ಯದ ಜನತೆ ಮತ್ತೆ ಬಿಜೆಪಿಗೆ ಜನರ ಫಲಿತಾಂಶದಲ್ಲೂ ಆಶಿರ್ವಾದ ಮಾಡಲಿದ್ದಾರೆ ಎಂದು ಹೇಳಿದರು.

Exit mobile version