Site icon PowerTV

ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಾರ್ಟಿ : ಸದಾನಂದ ಗೌಡ

ಮಂಗಳೂರು : ಬಿಜೆಪಿ ಪಂಜಾಬ್​​ನಲ್ಲಿ ವಿಸ್ತರಣೆ ಮಾಡದಂತೆ ಷಡ್ಯಂತ್ರ ರೂಪಿಸಿದ್ದರು ಆದರೆ, ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಾರ್ಟಿ ಎಂದು ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿಂದು ಮಾತನಾಡಿದ ಅವರು ನಿರೀಕ್ಷೆಯಂತೇ ಫಲಿತಾಂಶ ಬರುತ್ತಿದೆ. ಬಿಜೆಪಿ ಸರ್ಕಾರ ಮಾಡಿದ ಕೆಲಸ ಕಾರ್ಯದ ಆಧಾರವಾಗಿ ಜನ ಮತ ನೀಡಿದ್ದಾರೆ. ಇದುವರೆಗೂ ಪಂಜಾಬ್​​ನಲ್ಲಿ ಕಾಂಗ್ರೆಸ್​​ ಬಿಟ್ಟು, ಬಿಜೆಪಿಗೆ ನೆಲೆ ಇರಲಿಲ್ಲ, ಈಗಲೂ ಇಲ್ಲ. ಆದರೆ, ಈ ಬಾರಿ ಅಲ್ಲಿ ಕಾಂಗ್ರೆಸ್​​ಗೂ ಅಧಿಕಾರವಿಲ್ಲದೇ ಆಪ್​​ಗೆ ಸಿಕ್ಕಿದೆ. ಅಲ್ಲದೇ ಅಕಾಲಿದಳ ಕಾಂಗ್ರೆಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸಿದೆ.

ಇನ್ನು ಬಿಜೆಪಿ ಪಂಜಾಬ್​​ನಲ್ಲಿ ವಿಸ್ತರಣೆ ಮಾಡದಂತೆ ಷಡ್ಯಂತ್ರ ರೂಪಿಸಿದ್ದರು ಹೀಗಾಗಿ ಬಿಜೆಪಿಗೆ ಪಂಜಾಬ್​​ನಲ್ಲಿ ಸ್ವಲ್ಪ ಹಿನ್ನಡೆಯಾಗಿದೆ ಆದರೂ ಕಳೆದ ಬಾರಿಗಿಂತ ಪಂಜಾಬ್​​ನಲ್ಲಿ ಬಿಜೆಪಿ ಸೀಟು ಅಧಿಕವಾಗಿದೆ. ಉಳಿದ ನಾಲ್ಕು ಕಡೆ ನಿರೀಕ್ಷೆಯಂತೆ ಫಲಿತಾಂಶ ಬರುತ್ತಿದೆ ಎಂದರು.

ಇನ್ನು ಯುಪಿಯಲ್ಲಿ ಸಿಎಂ ಯೋಗಿ ಗೂಂಡಾ ರಾಜ್ಯವನ್ನು ಜನಸಾಮಾನ್ಯರ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯೂ ಆಗಿದೆ ಮತ್ತು ರಸ್ತೆಗಳು ಮೂಲಸೌಕರ್ಯಗಳ ಅಭಿವೃದ್ಧಿಯೂ ಕೂಡ ಆಗಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರೂ ಬಿಜೆಪಿಯೇ ಕರ್ನಾಟಕದಲ್ಲಿ ಅತೀ ದೊಡ್ಡ ಪಾರ್ಟಿ ಮಿಂಚುತ್ತಿದೆ ಎಂದು ಡಿವಿ ಸದಾನಂದ ಗೌಡ ಹೇಳಿದರು.

Exit mobile version