Site icon PowerTV

ಪಂಚರಾಜ್ಯ ಚುನಾವಣೆ; ಯಾರು ಎಲ್ಲಿ ಎಷ್ಟು ಮುನ್ನಡೆ?

ಐದು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ.  ಉತ್ತರಾಖಂಡ್ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ 152ಮತ್ತು ಎಸ್ ಪಿ 100ರಲ್ಲಿ ಮುನ್ನಡೆ. ಗೋವಾದಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಮುನ್ನಡೆ. ಉತ್ತರಾಖಂಡ್ ಕಾಂಗ್ರೆಸ್8ಬಿಜೆಪಿ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಂಜಾಬ್​ನಲ್ಲಿ ಆಪ್ 37 ಮತ್ತು ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಗೋವಾದಲ್ಲಿ ಸರಳ ಬಹುಮತದತ್ತ ಕಾಂಗ್ರೆಸ್ ಮುನ್ನಡೆದಿದೆ. ಅದು ಗೋವಾದಲ್ಲಿ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉತ್ತರಾಖಂಡದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಪಂಜಾಬ್​ನ ಸಿಎಂ ಚೆನ್ನಿ ಎರಡೂ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಣಿಪುರದಲ್ಲಿ ಬಿಜೆಪಿ 16ರಲ್ಲಿ ಹಾಗೂ ಕಾಂಗ್ರೆಸ್ 13ರಲ್ಲಿ ಮುನ್ನಡೆ ಸಾಧಿಸಿವೆ.

Exit mobile version