Site icon PowerTV

ಪಂಚರಾಜ್ಯ ಚುನಾವಣೆ; ಯುಪಿಯಲ್ಲಿ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?

ಇದುವರೆಗಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನಿಸುವುದಾದರೆ ಉತ್ತರ ಪ್ರದೇಶದಲ್ಲಿ ಪೈಪೋಟಿಯಿದ್ದುದು ಆಡಳಿತಾರೂಢ ಬಿಜೆಪಿ ಹಾಗ ಸಮಾಜವಾದಿ ಪಕ್ಷಕ್ಕೆ. ಈ ಪೈಪೋಟಿಯಲ್ಲಿ ಬಿಜೆಪಿ ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್​ ಗಳಿಸುವಷ್ಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಕಳೆದ ಚುನಾವಣೆ ಫಲಿತಾಂಶವನ್ನು ಹೋಲಿಸಿ ನೋಡುವುದಾದರೆ ಬಿಜೆಪಿ 263 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, 60 ಸ್ಥಾನಗಳಷ್ಟು ಹಿನ್ನಡೆ ಕಂಡಿದೆ.

ಸಮಾಜವಾದಿ ಪಕ್ಷ 128 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಕಳೆದ ಚುನಾವಣೆಯನ್ನು ಹೋಲಿಸಿ ನೋಡುವುದಾದರೆ, 75 ಸ್ಥಾನಗಳಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಮುನ್ನಡೆ ಸಾಧಿಸಿದೆ. ಮಾಯಾವತಿಯ ಬಿಎಸ್​ಪಿ ಈ ಬಾರಿ ಕೇವಲ 6 ಸ್ಥಾನಗಳನ್ನು ಗಳಿಸಿ 13 ಸ್ಥಾನಗಳ ಕಡಿತ ಅನುಭವಿಸಿ ದಯನೀಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನು ಗಳಿಸಿದ್ದು ಕಳೆದ ಬಾರಿಗಿಂತ 3 ಸ್ಥಾನಗಳ ಹಿನ್ನಡೆ ಅನುಭವಿಸಿದೆ.

Exit mobile version