Site icon PowerTV

Election Results; ಗೋವಾದಲ್ಲಿ ಬಿಜೆಪಿ ಮುನ್ನಡೆ

ಪಂಚರಾಜ್ಯ ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳ ನಡುವೆ ಭಾರೀ ಪೈಪೋಟಿ ನಡೆದಿದೆ. ಮೊದಲು ಇಲ್ಲಿ 18 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದ ಕಾಂಗ್ರೆಸ್ ಏಕಾಏಕಿ 12 ಸ್ಥಾನಗಳಿಗೆ ಕುಸಿಯಿತು. ಇದರ ವಿರುದ್ಧವಾಗಿ ಹಿನ್ನಡೆಯಲ್ಲಿದ್ದ ಬಿಜೆಪಿ ಕಾಂಗ್ರೆಸ್ ಮುನ್ನಡೆಯನ್ನು ತನ್ನದಾಗಿಸಿಕೊಂಡು ಮುನ್ನಡೆಯನ್ನು 18ಕ್ಕೆ ಹೆಚ್ಚಿಸಿಕೊಂಡಿದೆ.

ಗೋವಾದ ಕಳೆದ ಬಾರಿಯ ಚುನಾವಣಾ ಫಲಿತಾಂಶವನ್ನು ಹೋಲಿಸಿ ನೋಡುವುದಾದರೆ ಬಿಜೆಪಿ 5 ಹೆಚ್ಚುವರಿ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, 8 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಕಳೆದ ಬಾರಿ ಖಾತೆಯೇ ತೆರೆಯದಿದ್ದ ಆಮ್ ಆದ್ಮಿ 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು 3 ಸ್ಥಾನಗಳಲ್ಲಿ ಮುಂದಿದ್ದು, ಕಳೆದ ಬಾರಿಗಿಂತ ಒಂದು ಸ್ಥಾನದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

Exit mobile version