Site icon PowerTV

ಕೇಂದ್ರ ಯಾವಾಗ ಬೇಕಾದರೂ ನಮ್ಮನ್ನು ನೇಣು ಹಾಕಬಹುದು: ಹೆಚ್​ಡಿಕೆ

ಬೆಂಗಳೂರು: ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್‌ ಮೇಲಿನ ಚರ್ಚೆಯಲ್ಲಿ ಕೇಂದ್ರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜಿಎಸ್‌ಟಿ ವಿಚಾರದಲ್ಲಿ ನಾವು ಯಾಮಾರಿದ್ದೇವೆ. ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಅನ್ಯಾಯವಾಗಿದೆ. ಕುತ್ತಿಗೆ, ಹಗ್ಗ ಎರಡನ್ನೂ ಕೇಂದ್ರಕ್ಕೆ ಕೊಟ್ಟಿದ್ದೇವೆ. ಅವರು ಯಾವಾಗ ಬೇಕಾದರು‌ ನಮ್ಮನ್ನ ನೇಣು‌ ಹಾಕಬಹುದು. ಕೇಂದ್ರ ಸರ್ಕಾರದ ದೋರಣೆ ಆರ್ಥಿಕ ಸರ್ವಾಧಿಕಾರ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಇದರಿಂದ ರಾಜ್ಯಗಳ ಸ್ವಾಯತ್ತತೆಯನ್ನೇ ಕಳೆದುಕೊಂಡಂತಾಗಿದೆ ಎಂದು ಕಲಾಪದಲ್ಲಿ ಜಿಎಸ್‌ಟಿ ಬಗ್ಗೆ ಮಾಜಿ ಸಿಎಂ ಹೆಚ್‌ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.

Exit mobile version