Site icon PowerTV

ಅಭಿಷೇಕ್​ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸುಮಲತಾ ಪ್ರತಿಕ್ರಿಯೆ

ಮಂಡ್ಯ-ಮೈಸೂರು: ಶ್ರೀರಂಗಪಟ್ಟಣದಲ್ಲಿ ಹೆಚ್ಚು ರೈಲುಗಳು ನಿಲುಗಡೆ ಮಾಡಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಬುಧವಾರ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿರುವ ರೈಲ್ವೆ ವ್ಯವಸ್ಥಾಪಕ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳೊಟ್ಟಿಗೆ ಮಾತುಕತೆ ನಡೆಸಿದರು. ಈ ವೇಳೆ ಮಂಡ್ಯದಲ್ಲಿ ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಬಳಿಕ ಮಾತನಾಡಿದ ಅವರು, ಶ್ರೀರಂಗಪಟ್ಟಣವನ್ನು ಟೂರಿಸಂ ಸರ್ಕ್ಯೂಟ್ ಮಾಡುವ ಕನಸಿದೆ. ಕನಿಷ್ಟ 21 ಬೋಗಿ ಇರುವ ರೈಲುಗಳನ್ನು ನಿಲ್ಲಿಸಲು ಕೇಳಿದ್ದೇನೆ ಎಂದಿದ್ದಾರೆ.

ಸದ್ಯ ಪ್ರಾಧಾನ್ಯತೆ ಮೇರೆಗೆ ಕೆಲವೊಂದು ಕೆಲಸಗಳು ಮಾಡ್ತಾರೆ ಇದರಿಂದ ಆ ಭಾಗದ ರೈತರಿಗೆ ತುಂಬಾ ಅನುಕೂಲ ಆಗಲಿದೆ‌ ಎಂದು ಹೇಳಿದರು.

ಅಭಿಷೇಕ್​ ಅಂಬರೀಶ್​​ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದು ಅಭಿಷೇಕ್ ಅವರನ್ನೇ ಕೇಳಬೇಕು. ಅಭಿಷೇಕ್ ನನಗೆ ಏನೂ ಹೇಳುವುದಿಲ್ಲ. ಸಿನಿಮಾ ಬಗ್ಗೆ ಕೂಡ ಆತ ನನ್ನ ಜೊತೆ ಚರ್ಚೆ ಮಾಡುವುದಿಲ್ಲ ಎಂದರು.

Exit mobile version