Site icon PowerTV

ಕಾಂಗ್ರೆಸ್​​​ಗೆ ನೈತಿಕ ಹಕ್ಕಿಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್​​​ಗೆ ನೈತಿಕ ಹಕ್ಕಿಲ್ಲ ಎಂದು ವಿಪಕ್ಷದ ಆರ್.ಟಿ.ನಗರದ ನಿವಾಸದ ಬಳಿ ಸಿಎಂ ಬೊಮ್ಮಾಯಿ  ಆರೋಪ ಮಾಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಬ್ಬ ನಾಲಾಯಕ್​​ ಎಂದು ಡಿಕೆಶಿ ಆರೋಪ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿ ಕಾಂಗ್ರೆಸ್​​​ನವರಿಗೆ ನೈತಿಕ ಹಕ್ಕಿಲ್ಲ ಕಾನೂನು ತನ್ನ ಕೆಲಸ ಮಾಡಿದರೆ ಬಹಳ ವಿಪರೀತ ರಿಯಾಕ್ಷನ್ ಮಾಡೋದು ಅವರ ಕೆಲಸವಾಗಿ ಬಿಟ್ಟಿದೆ. ನಾನು ಏನು ಹೇಳೋಕೆ ಇಚ್ಚೆ ಪಡುತ್ತೇನೆಂದರೆ ಕಾಂಗ್ರೆಸ್  ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಮೇಲೆ‌ ಎಷ್ಟು ಕೇಸ್ ಹಾಕಿದೆ ? ಎಷ್ಟು ಲಾಠಿ ಚಾರ್ಚ್ ಮಾಡಿದ್ದೀರಾ ವಿರೋಧ ಪಕ್ಷವನ್ನ ಹತ್ತಿಕ್ಕಲು ಎಷ್ಟು ಪ್ರಯತ್ನ ಮಾಡಿದ್ದೀರಾ ಎಂದು ವ್ಯಂಗ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷಕ್ಕೆ ಪ್ರತಿಭಟನೆ ಮಾಡೋಕೆ ಅವಕಾಶ ಇದೆ. ಅದೇ ರೀತಿ ಕಾನೂನಿನ ಅನ್ವಯ ಕೆಲಸ ಮಾಡುವುದಕ್ಕು ಕೂಡ ಅವಕಾಶ ಇದೆ. ಆದರೆ, ವಾಸ್ತವಾಂಶ ತಿಳಿಯದೆ ಮಾತಾಡೋದು ನೋಡಿದರೇ ಕಾಂಗ್ರೆಸ್ ಪಕ್ಷವು ಎಷ್ಟು ತಳಮಟ್ಟಕ್ಕೆ ಬಂದಿದೆ ಅಂತಾ ಗೊತ್ತಾಗ್ತ ಇದೆ ಎಂದರು.

ಅಧಿಕಾರ ಪಟ್ಟ ಹಿಡಿಯಲು ಪಾದಯಾತ್ರೆ ಮಾಡ್ತಾ ಇದೆ. ಎಲ್ಲ ಕಡೆ ಪಾದಯಾತ್ರೆ ಮಾಡಿ ಟ್ರಾಫಿಕ್ ಜಾಮ್ ಮಾಡ್ತಾ ಇದೆ, ಇದರಿಂದ ಜನ ಸಾಮಾನ್ಯದವರಿಗೂ ತೊಂದರೆ ಮಾಡ್ತಾ ಇದ್ದಾರೆ. ಡಿಕೆ ಶಿವಕುಮಾರ್ ಅವರು ಸುಮಾರು ಖಾತೆ ಹೊಂದಿದ್ದ ಅನುಭವ ರಾಜಕಾರಣಿ ಅವರು ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರ ಬಗ್ಗೆ ಮಾತಾಡೋದು ಬಹಳ ಸುಲಭ ಅಂತಾ ಬಾಯಿಗೆ ಬಂದ ಹಾಗೇ ಮಾತನಾಡುವುದಲ್ಲ.

ಯಾವುದೇ ಘಟನೆ ಇನ್ನೊಂದು ಘಟನೆ ಜೋಡನೆ ಮಾಡೋದು ಸರಿಯಲ್ಲ ಹಾಗೂ ತಮ್ಮ ಪಾತ್ರ ಏನ್​ ಇದೆ ಅದರ ಬಗ್ಗೆ ವಿಶ್ಲೇಷಣೆ ಮಾಡಬೇಕು ಎಂದು ಡಿಕೆಶಿ ವಿರುದ್ಧ ಸಿಎಂ ಬೊಮ್ಮಾಯಿ ಹರಿಹಾಯ್ದರು.

Exit mobile version