Site icon PowerTV

ತಮಿಳುನಾಡನ್ನು ಒಪ್ಪಿಸುವ ತಾಕತ್ತು ಸಿದ್ದರಾಮಯ್ಯನವರಿಗಿದೆ: ಸಿ ಟಿ ರವಿ

ಚಿಕ್ಕಮಗಳೂರು : ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲ ಎಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲ.ನಮ್ಮ ಪ್ರಶ್ನೆಗಳಿಗೆ ಇವತ್ತಿನವರೆಗೂ ಉತ್ತರ ಕೊಡ್ಲಿಲ್ಲ.ನೀವು ಇಲ್ಲಿ ಪಾದಯಾತ್ರೆ ನಾಟಕವನ್ನು ಮಾಡೋದರ ಬದಲಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವ್ರು ನಿಯೋಗ ಕರ್ಕೊಂಡು ಹೋಗಿ ಅಲ್ಲಿರುವ ಕಾಂಗ್ರೆಸ್ ಚಿದಂಬರಂ, ಡಿಎಂಕೆ ಸ್ಟಾಲೀನ್ ಅವ್ರನ್ನ ಒಪ್ಪಿಸಿದ್ರೆ ಸುಲಭವಾಗುತ್ತೆ. ಅವ್ರು ಅಕ್ಷೇಪಣೆ ಇಲ್ಲ ಅಂದ್ರೆ ಎಲ್ಲ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತೆ ಎಂದರು.

ಪಾದಯಾತ್ರೆ ದೈಹಿಕ ಕಸರತ್ತು ಕೊಡಬಹುದು,ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವ್ರಿಗಿದೆ.ಒಂದು ಮಾತು ಸಿದ್ದರಾಮಯ್ಯ ಅವ್ರು ಗುಟ್ರು ಹಾಕಿದ್ರೆ ಸೋನಿಯಾಗಾಂಧಿ ಆಲಾರ್ಟ್ ಅಗ್ತಾರೆ.ಸೋನಿಯಾಗಾಂಧಿ ಮಾತು ಹೇಳಿದ್ರೆ ಚಿದಂಬರಂ ತೆಗೆದುಹಾಕಲ್ಲ.ಚಿದಂಬರಂ ಒಂದು ಮಾತು ಹೇಳಿದ್ರೆ ಸ್ಟಾಲಿನ್ ತೆಗೆದುಹಾಕಲ್ಲ.ಇದು ಸುಲಭದಲ್ಲಿ ಅಗಲಿರುವ ಸಂಗತಿ ಇಲ್ಲಿ ಮಾಡ್ತಾ ಇರೊ ಉದ್ದೇಶ ರಾಜಕಾರಣ ಅದು ಬಿಟ್ಟು ಬೇರೆನೂ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ ಹೇಳಿದ್ದಾರೆ.

Exit mobile version