Site icon PowerTV

ಹಿಂದೂಗೆ ನನ್ನ ಟಿಕೆಟ್ ಬಿಟ್ಟು ಕೊಡಲು ಸಿದ್ಧ: ಈಶ್ವರಪ್ಪ

ರಾಯಚೂರು : ಹಿಜಾಬ್ ವಿವಾದದಿಂದ ಮುಸ್ಲಿಂ ಓಟು ಪಡೆಯುವ ಭ್ರಮೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗುವ ಕನಸಿನ ಲೋಕದಲ್ಲಿ ಇದ್ದಾರೆ ಎಂದು ರಾಯಚೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗವಾಡಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರಪ್ಪ ಅವರು ಕಾಂಗ್ರೆಸ್ ಪಕ್ಷವು ಎರಡು ಗುಂಪುಗಳಾಗಿವೆ.  ಯು.ಟಿ.ಖಾದರ್ ಮತ್ತು ಕೆಲವು ಶಾಸಕರು ಈಗಾಗಲೇ ಹಿಜಾಬ್ ವಿವಾದಕ್ಕೆ ಎಸ್‌ಡಿಪಿಐ, ಪಿಎಫ್‌ಐ ಕೈವಾಡವಿದ್ದು, ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಹಿಜಾಬ್ ಪರ ಮಾತನಾಡುತ್ತಾರೆ‌ ಎಂದರು.

ಗೋವಾದಲ್ಲಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಇಲ್ಲಿ ಮಹಾದಾಯಿ, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದಾರೆ. ಕೆಲಸವಿಲ್ಲದೇ ಕಾಂಗ್ರೆಸ್​​​ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹಂತದ ಹೋರಾಟ ಮಾಡಿದ್ದಾಗಿ ಹೇಳಿದ್ದಾರೆ. ಈಗ ಮತ್ತೇ ಮೇಕೆದಾಟು ಬಾಹುಬಲಿ 1.2 ನಾಟಕ ಶುರು ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ  ವ್ಯಂಗ್ಯವಾಡಿದ ಕಾಂಗ್ರೆಸ್​​ ಪಕ್ಷದ ವಿರುದ್ಧ ವ್ಯಂಗವಾಡಿದ್ದಾರೆ.

ಇನ್ನು, ಹರ್ಷ ಕುಟುಂಬಸ್ಥರಿಗೆ ಶಿವಮೊಗ್ಗ ಬಿಜೆಪಿ ಟಿಕೆಟ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ ಕಾಂಗ್ರೆಸ್ ಎಂ ಎಲ್​​ ಸಿ ಹರಿಪ್ರಸಾದ್​​ಗೆ ಟಾಂಗ್ ನೀಡಿದರು. ಹಿಂದೂಗೆ ನಾನು ನನ್ನ ಟಿಕೆಟ್ ಬಿಟ್ಟು ಕೊಡಲು ರೆಡಿ ಇದ್ದೇನೆ ಆದರೆ ಮುಸ್ಲಿಂರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಬಿಟ್ಟುಕೊಡೋದಿಲ್ಲ. ನಮ್ಮ ಪಕ್ಷ ಹೇಳಿದ್ರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಅದೇ ಹರಿಪ್ರಸಾದ್ ತನ್ನ ವಿರೋಧ ಪಕ್ಷ ನಾಯಕ ಸ್ಥಾನ ಸಿಎಂ ಇಬ್ರಾಹಿಂಗೆ ಬಿಟ್ಟು ಕೊಡ್ತಾನಾ? ಎಂದು ಪ್ರಶ್ನೆ ಮಾಡಿದರು. ಜತೆಗೆ ಮುಸ್ಲಿಂರನ್ನ ಕಾಂಗ್ರೆಸ್ ಓಟ್ ಬ್ಯಾಂಕ್​​​ಗಾಗಿ ಬಳಕೆ  ಮಾಡಿಕೊಳ್ಳುತ್ತದೆ ಹೊರತು ಯಾವುದೇ ಸ್ಥಾನ ಮಾನ ಕೊಡೋದಿಲ್ಲ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.

Exit mobile version