Site icon PowerTV

ಮೇಕೆದಾಟು: ಇಂದು ಇತಿಹಾಸ ರಚಿಸುವ ದಿನ: ರಣದೀಪ್ ಸುರ್ಜೆವಾಲ

ರಾಮನಗರ: ರಾಮನಗರದಲ್ಲಿಂದು ನಮ್ಮ ನೀರು ನಮ್ಮ ಹಕ್ಕು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರದಿಂದ ಬಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವಂಥ ರಣದೀಪ್ ಸುರ್ಜೆವಾಲ ಅಪಾರ ಜನಸಮೂಹವನ್ನುದ್ದೇಶಿಸಿ ಮಾತಾಡಿದರು. ಡಿಕೆಶಿಯನ್ನು ಜೋಶಿಲೆ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ್ ಎಂದು ಸಂಭೋದಿಸಿದ ಸುರ್ಜೆವಾಲ ಕಾಂಗ್ರೆಸ್​ನ ಎಲ್ಲ ಮುಖಂಡರನ್ನು ಸಂಭೋದಿಸಿದ ನಂತರ, ಇಂದು ದೀರ್ಘವಾಗಿ ಮಾತಾಡುವ ದಿನವಲ್ಲ, ಇಂದು ಇತಿಹಾಸ ರಚಿಸುವ ದಿನ ಎಂದು ಅರ್ಥಗರ್ಭಿತವಾಗಿ ಹೇಳಿದರು.

ನಮ್ಮ ನೀರು ನಮ್ಮ ಹಕ್ಕು ಎಂಬು ಘೋಷ ವಾಕ್ಯವನ್ನು ನೆರೆದಿದ್ದ ಸಾವಿರಾರು ಜನರ ಬಾಯಿಂದ ಹೇಳಿಸಿದ ಸುರ್ಜೆವಾಲ ಇಲ್ಲಿನ ನೀರು ನಿಮ್ಮ ಹಕ್ಕು ಎಂಬುದನ್ನು ಒತ್ತಿ ಹೇಳಿದರು. ಕಾವೇರಿಯ ಒಂದೊಂದು ಹನಿ ನೀರಿನ ಮೇಲೂ ನಿಮ್ಮ ಹಕ್ಕಿದೆ ಎಂದು ಜನರಿಗೆ ಸಾರಿ ಹೇಳಿದರು. ಈ ಮೇಕೆದಾಟು ಯೋಜನೆಗೆ ಯಾವುದಾದರೂ ಅಡ್ಡಿಯಿದ್ದರೆ ಅದು ಒಂದೇ ಒಂದು, ಅದೆಂದರೆ ಬೆಂಗಳೂರಿನಲ್ಲಿ ಕುಳಿತಿರುವ ಬಿಜೆಪಿ ಸರಕಾರ ಎಂದು ಕಟುವಾಗಿ ಟೀಕಿಸಿದರು.

Exit mobile version