Site icon PowerTV

ಮೋದಿ ಸರ್ಕಾರ ವಿಫಲ ; ಹರಿಪ್ರಸಾದ್

ಬೆಂಗಳೂರು : ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆಯ ಪರಿಷತ್ ವಿಪಕ್ಷ ನಾಯಕ ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್ ಅವರು ಕಿಡಿಕಾರಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಉಕ್ರೇನ್​​​ನಲ್ಲಿ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿ ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ನೆಹರು ನೀತಿಯನ್ನು ಇವತ್ತು ಎಲ್ಲರು ಮಾತಾಡಿದ್ದಾರೆ. ನೆಹರು ವಿರುದ್ಧ ಮಾತಾಡೋ ಮೋದಿ, ಸಂಘದವರು ಎಂದು ಈಗ ಅರ್ಥ ಆಗುತ್ತಿದೆ. ಅಲಿಪ್ತ ನೀತಿ ಬಗ್ಗೆ ಮಾತಾಡಬೇಕಿತ್ತು ಎಂದು ಹೇಳಿದರು.

ಯುದ್ದಕ್ಕು ಮುನ್ನ ಕೇಂದ್ರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಮೋದಿ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಲಾಕ್ ಡೌನ್ ಘೋಷಣೆ ಮಾಡಿದ ಹಾಗೆ ಇದನ್ನು ಮಾಡಿದೆ. ಇದೀಗ ಯುದ್ದ ಕಾಲದಲ್ಲಿ ಭಾರತ ಶಸ್ತ್ರಾಭ್ಯಾಸ ಮಾಡಿದೆ. ಇದು ಭಾರತ ದೇಶದ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಹರಿಪ್ರಸಾದ್  ಆಕ್ರೋಶ ವ್ಯಕ್ತಪಡಿಸಿದರು.

Exit mobile version