Site icon PowerTV

ನಾನು ದುರಹಂಕಾರದಲ್ಲಿ ನಡ್ಕೊಂಡಿಲ್ಲ : ಹೆಚ್​​ಡಿಕೆ

ರಾಮನಗರ : ಇಸ್ಪೀಟ್‌ ಆಡಿ ಸಾಲ ಮಾಡಿಕೊಂಡ ಗ್ಯಾಂಬ್ಲರ್‌ಗಳ ಸಾಲವನ್ನು ನಾನು ತೀರಿಸಬೇಕಿತ್ತಾ? ಅಂತಹವರು ಇದೀಗ ನನ್ನ ಪಕ್ಷ ತೊರೆಯುತ್ತಿದ್ದಾರೆ. ಅವರ ಸಾಲವನ್ನು ಅ​ಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮಾಡಿರುವ ಹಣದಿಂದ ತೀರಿಸುತ್ತಾರಂತೆ ಬಿಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಅನಾರೋಗ್ಯಕ್ಕೆ ತುತ್ತಾಗುವ ಬಡವರ ಚಿಕಿತ್ಸೆಗೆ ನೆರವು ನೀಡುತ್ತೇನೆ. ಇಂತಹವರ ಸಾಲವನ್ನು ತೀರಿಸುವ ಜವಾಬ್ದಾರಿಯನ್ನು ಪಾಪ ಅವರು ವಹಿಸಿಕೊಂಡಿದ್ದಾರೆ. ನನ್ನ ಸರ್ಕಾರವನ್ನು ಕೆಡವಿದೆ ಎಂದು ಹೇಳಿಕೊಂಡು ಎಂಎಲ್‌ಸಿ ಆದವರು, ತಾಲೂಕಿನ ಕೆಲವು ಅಧಿ​ಕಾರಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

ಅಲ್ಲಿಗೆ ವರ್ಗ ಮಾಡಿಸುತ್ತೇನೆ, ಇಲ್ಲಿಗೆ ವರ್ಗ ಮಾಡಿಸುತ್ತೇನೆ ಎಂದು ಅ​ಧಿಕಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದು, ಆ ಹಣದಿಂದ ಮುಖಂಡರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು, ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ದಾಳಿ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದ್ದೇವೆ ಅಂತ ಯಾವತ್ತು ದುರಹಂಕಾರದಲ್ಲಿ ನಡೆದುಕೊಂಡಿಲ್ಲ. ಸೋತಾಗ ಗೆದ್ದಾಗ ಎರಡೂ ಟೈಮಲ್ಲಿ ಒಂದೇ ತರ ಇದ್ದೀವಿ. ಕಲ್ಲು ಬಂಡೆ ಒಡೆದೋ, ಯಾರದೋ ಬಡವರ ಜಮೀನು ಲಪಟಾಯಿಸಿಕೊಂಡು ರಾಜಕಾರಣ ಮಾಡಿಲ್ಲ ನಾವು. ಮಣ್ಣಿನ ಮಕ್ಕಳು ಅಂತಾರೆ ಕ್ಷೇತ್ರದಲ್ಲಿ ಯಾರನ್ನಾದರೂ ಕೇಳಿ ಇವರಿಗೆ ಮಣ್ಣಿನ ಮಕ್ಕಳು ಅಂತಾರಾ ಎಂದು ಮಣ್ಣಿನ ಮಕ್ಕಳು ಎಂದು ಹೆಗಲ ಮೇಲೆ ಬೋರ್ಡ್ ಹಾಕಿಕೊಂಡು ದಿನ ರಾಜ್ಯ ಸುತ್ತಿ ಅಂದಿದ್ದೇನೆಂದು ಡಿಕೆ ಬ್ರದರ್ಸ್ ವಿರುದ್ಧ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Exit mobile version