Site icon PowerTV

ಬುಲೆಟ್​ಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರು ಸಾವು

ಕೋಲಾರ : ಬುಲೆಟ್ ಬೈಕ್​​ಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೋಲಾರದ ಮಾಲೂರು ತಾಲೂಕಿನ ಬೈರಸಂದ್ರ ಗೇಟ್ ಬಳಿ ನಡೆದಿದೆ.

ವೆಂಕಟರಾಜನಹಳ್ಳಿಯ ಗಂಗಾಧರ್ (26), ಮುರಳಿ (25) ಮೃತಪಟ್ಟ ದುರ್ದೈವಿಗಳು. ಇಬ್ಬರು ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ಹೋಗುತ್ತಿದ್ದಾಗ ಮಾಸ್ತಿ ರಸ್ತೆಯಲ್ಲಿರುವ ಬೈರಸಂದ್ರ ಗೇಟ್ ಬಳಿ ಇವರು ತೆರಳುತ್ತಿದ್ದ ಬುಲೆಟ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಡಿಕ್ಕಿಯ ರಭಸಕ್ಕೆ ಬುಲೆಟ್ ವಾಹನ ನಜ್ಜುಗುಜ್ಜಾಗಿದೆ.

ಸದ್ಯ, ಈ ಪ್ರಕರಣವು ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅಪರಿಚಿತ ವಾಹನಕ್ಕೆ ಹುಡುಕಾಟ ನಡೆಯುತ್ತಿದೆ.

Exit mobile version