Site icon PowerTV

ಕಾಂಗ್ರೆಸ್ ಶಾಸಕರನ್ನು ಸದನದಿಂದ ಹೊರ ಹಾಕಿ : ಹೆಚ್ ಕೆ ಕುಮಾರಸ್ವಾಮಿ

ಬೆಂಗಳೂರು: ಎರಡು ಸದನಗಳು ಪ್ರಾರಂಭವಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದೇವೆ. ಜನರ ಸಮಸ್ಯೆಗಳು ಚರ್ಚೆ ಆಗಬೇಕು ಎಂದು ಹೆಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

ಸದನದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬನ ಹಕ್ಕು ಕಾಂಗ್ರೆಸ್ ನವರು ಧರಣಿ ಮಾಡುತ್ತಿದ್ದಾರೆ‌. ಕಾಂಗ್ರೆಸ್ ಪಕ್ಷದ ಸ್ವಾರ್ಥ ಕಾಣಿಸುತ್ತಿದೆ. ಬಿಜೆಪಿ ಸಹ ಸರಿಯಾಗಿ ಉತ್ತರ ನೀಡುತ್ತಿಲ್ಲ. ಕೋವಿಡ್ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿಲ್ಲ.ರಾಗಿ, ಭತ್ತಕ್ಕೆ ಬೆಂಬಲ ಬೆಲೆ ಇಲ್ಲ. ಇದೆಲ್ಲವನ್ನೂ ಚರ್ಚೆ ಮಾಡಬೇಕು.ಸ್ಪೀಕರ್ ಅವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.ಹೊರ ಹಾಕಿದ ತಕ್ಷಣ ವ್ಯತ್ಯಾಸ ಆಗಲ್ಲ.ಸರ್ಕಾರ ಯಾಕೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ‌ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಈಶ್ವರಪ್ಪ ಅವರದ್ದು ಒಂದೆ ಸಮಸ್ಯೆ. ಉಳಿದ ಸಮಸ್ಯೆಗಳಿವೆ‌ ಹಾಗಾಗಿ ಸ್ಪೀಕರ್ ಮನವೊಲಿಸಬೇಕು, ಇಲ್ಲವಾದಲ್ಲಿ ಕಾಂಗ್ರೆಸ್​ನವರನ್ನು ಸದನದಿಂದ ಹೊರ ಹಾಕಲಿ ಎಂದು ಕಾಂಗ್ರೆಸ್ ನಾಯಕರನ್ನು ಹೊರ ಹಾಕುವಂತೆ ಜೆಡಿಎಸ್ ನಾಯಕರ ಒತ್ತಾಯ ಮಾಡಿದ್ದಾರೆ.

Exit mobile version