Site icon PowerTV

ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ : ಬಿ ಕೆ ಹರಿಪ್ರಸಾದ್

ಬೆಂಗಳೂರು : ಕಾಂಗ್ರೆಸ್​​​ನಿಂದ ಗಲಭೆಯಾಯ್ತು ಅಂತ ಈಶ್ವರಪ್ಪ ಹೇಳಿಕೆಗೆ ಪರಿಷತ್ ವಿಪಕ್ಷ ನಾಯಕ ಬಿ ಕೆ  ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಇನ್ನೂ ಶಿವಮೊಗ್ಗ ಕೊಲೆ ಘಟನೆಯ ತನಿಖೆಯಾಗಿಲ್ಲ, ಆಗಲೇ ಅಲ್ಪಸಂಖ್ಯಾತರ ಮೇಲೆ ಈಶ್ವರಪ್ಪ ಆರೋಪ ಮಾಡುತಿದ್ದಾರೆ. ತನಿಖೆಯಾಗುವ ಮೊದಲು ಆರೋಪ ಮಾಡುವುದು ತಪ್ಪು. ಹಿಂದೆ ಈ ಇದೆ ರೀತಿ ಶಿವಮೊಗ್ಗ ಘಟನೆಯಲ್ಲಿ ಆರೋಪ ‌ಮಾಡಿದ್ರು. ಆಮೇಲೆ ಹಿಂದೂಗಳೆ ಕೊಲೆ ಮಾಡಿದ್ದು ಅಂತ ಗೊತ್ತಾಯಿತು. ಈಶ್ವರಪ್ಪ ವಜಾ ಮಾಡು ವರೆಗೆ ನಮ್ಮ ಹೋರಾಟ ಮುಂದುವರೆಯತ್ತೆ ಅಂತ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ ವಾಗ್ದಾಳಿ ಮಾಡಿದ್ದರೆ.

ಸಂವಿಧಾನ ಹುದ್ದೆಯಲ್ಲಿ ಇದ್ದುಕೊಂಡು ಈ ಹೇಳಿಕೆ ನೀಡುವುದು ಸರಿಯಲ್ಲ, ಗಲಭೆಗೆ ಮತ್ತೆ ಕುಮ್ಮಕ್ಕು  ನೀಡುವುದು ಸರಿಯಲ್ಲಇನ್ನೂ ಪೊಲೀಸ್ ತನಿಖೆ ನಡೆಯುತ್ತಿದೆ ಈಗಲೇ ಅಫಾದನೆ ಮಾಡುವುದು ಸರಿಯಲ್ಲ
ಹಿಂದೆ ಶಿವಮೊಗ್ಗದಲ್ಲಿ ಗಲಭೆಯಾದಗ ಮುಸ್ಲಿಂ ಮೇಲೆ ಆರೋಪ ‌ಮಾಡಲಾಗಿತ್ತು, ಆ ಬಳಿಕ ಹಿಂದೂಗಳು ಕೊಲೆ ಮಾಡಿದ್ರು ಅಂತ ಕೇಸ್ ದಾಖಲಾಯಿತು. ಹೀಗಾಗಿ ಈಗಲೆ ಮುಸ್ಲಿಂ ಮೇಲೆ ಆರೋಪ ಮಾಡುವುದು ಬೇಡ ಎಂದು ಹೇಳಿದರು. ಈಶ್ವರಪ್ಪ ರಾಜೀನಾಮೆ ಕೇಳುತಿದ್ದೇವೆ ಅದರಲ್ಲಿ ಯಾವುದೇ ರಾಜಿಯ ಮಾತೇ ಇಲ್ಲ.

ಪೋಲಿಸರು ತನಿಖೆ ನಡೆಸುವುದು ಅವರ ಜವಾಬ್ದಾರಿ ಇಂತಹ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಏನು ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಡಿ.ಕೆ ಶಿವಕುಮಾರ್ ಮೇಲೆ ಅಪಾದನೆ ಮಾಡಿದರೇ ಏನೂ ಸಾಧಿಸಲಾಗದು, ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲಾ ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ ಎಂದು ಹರಿಪ್ರಸಾದ ಆರೋಪ ಮಾಡಿದ್ದಾರೆ.

Exit mobile version