Site icon PowerTV

ಪಂಜಾಬ್ ವಿಧಾನಸಭೆ ಚುನಾವಣೆ: 117 ಸ್ಥಾನಗಳಲ್ಲಿ ಮತದಾನ

ಪಂಜಾಬ್ :  ಇಂದು ಪಂಜಾಬ್ ವಿಧಾನಸಭೆ ಚುನಾವಣೆಯು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

117 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಂಜಾಬ್‌ನಲ್ಲಿ 93 ಮಹಿಳಾ ಅಭ್ಯರ್ಥಿಗಳು, ಒಟ್ಟು 1,304 ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ. ಒಟ್ಟಿನಲ್ಲಿ ಪಂಜಾಬ್​​​ ಕ್ಷೇತ್ರದಲ್ಲಿ 2.14 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.

ಪಂಜಾಬ್‌ನಲ್ಲಿ ಸಿಎಂ ಚರಣ್ ಜಿತ್ ಸಿಂಗ್‌ ಚನ್ನಿ, ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್‌ ಮಾನ್‌, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು, ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಕಣದಲ್ಲಿದ್ದಾರೆ.

ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಾಲ್, ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಕೇಂದ್ರದ ಮಾಜಿ ಸಚಿವ ವಿಜಯ್ ಸಂಪ್ಲಾ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಭದ್ರತೆಗಾಗಿ ಸಿಎಪಿಎಫ್ ಸೇರಿದಂತೆ ಸುಮಾರು 4,000 ಪೊಲೀಸ್ ಸಿಬ್ಬಂದಿಯನ್ನು ಪಂಜಾಬ್‌ನಾದ್ಯಂತ ನಿಯೋಜಿಸಲಾಗಿದೆ.

Exit mobile version