Site icon PowerTV

ಕಾಂಗ್ರೆಸ್ ಆಹೋರಾತ್ರಿ ಧರಣಿಗೆ ಬಿಜೆಪಿ ಪ್ರತಿತಂತ್ರ..!

ಕಾಂಗ್ರೆಸ್ ರಾಜ್ಯಾದ್ಯಂತ ಈಶ್ವರಪ್ಪ ವಿರುದ್ಧ ಹೋರಾಟದ ಕಹಳೆ ಊದಿದೆ. ರಾಜ್ಯ ರಾಜಕೀಯದ ಪರಿಸ್ಥಿತಿಯನ್ನ ಅರಿತ ಬಿಜೆಪಿ ಹೈಕಮಾಂಡ್ ವರದಿ ಕೇಳಿದೆ. ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರ ಹೋರಾಟವನ್ನ ತಡೆಯಬೇಕೆಂದು ಸೂಚನೆ ನೀಡಿದೆ. ಹೈಕಮಾಂಡ್‌ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ರಾಜ್ಯ ಬಿಜೆಪಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಅಂದಹಾಗೇ ಈ ಮಹತ್ವದ ಸಭೆಯಲ್ಲಿ ಈಶ್ವರಪ್ಪ ಹೇಳಿಕೆ ಕುರಿತು ಚರ್ಚೆ ನಡೆಸಲಾಗುತ್ತೆ. ಕಾಂಗ್ರೆಸ್‌ನ ಅಹೋರಾತ್ರಿ ಧರಣಿ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತೆ. ಜೊತೆಗೆ ಕಾಂಗ್ರೆಸ್ ಹೋರಾಟವನ್ನು ಯಾವ ರೀತಿ ಹತ್ತಿಕ್ಕಬೇಕು, ಕಾಂಗ್ರೆಸ್ ಅಸ್ತ್ರಗಳಿಗೆ ಹೇಗೆ ಪ್ರತಿ ಅಸ್ತ್ರಗಳು ರೆಡಿ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ಆಗುತ್ತೆ. ಕಾಂಗ್ರೆಸ್‌ಗೆ ಹೇಗೆ ಡ್ಯಾಮೇಜ್ ಮಾಡಬೇಕು. ಅದನ್ನ ಜನರಿಗೆ ಯಾವ ರೀತಿ ಕನ್ವೆ ಮಾಡಬೇಕು, ಈಶ್ವರಪ್ಪ ಹೇಳಿಕೆಯನ್ನ ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದರ ಕುರಿತು ಸಭೆಯಲ್ಲಿ ಲೆಕ್ಕಚಾರ ನಡೆಯಲಿವೆ. ಇನ್ನು ಮುಂದೆ ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಕಿಚ್ಚು ಹಬ್ಬಿಸಿರೋ ಹಿಜಾಬ್ ವಿಚಾರವನ್ನ ಯಾವ ರೀತಿ ಬಳಸಿಕೊಳ್ಳಬೇಕು. ಹಿಜಾಬ್ ವಿಚಾರದಲ್ಲಿ ತಮ್ಮ ನಿಲುವೇನು ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಜಾಣ ನಡೆಯ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಸದ್ಯ ಕೋರ್ಟ್‌ನಲ್ಲಿರುವ ಪ್ರಕರಣವನ್ನ ಯಾವ ರೀತಿ ಹ್ಯಾಂಡಲ್ ಮಾಡಬೇಕು, ಹಿಜಾಬ್ ಹಿಂದೆ ಕಾಂಗ್ರೆಸ್‌ನ ಹುನ್ನಾರ ಇದೆ ಎಂಬುವುದನ್ನ ಜನರಿಗೆ ತಲುಪಿಸುವುದು ಹೇಗೆ ಎಂಬುವುದರ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು. ಜೊತೆಗೆ ಮೇಕೆದಾಟು ಪಾದಯಾತ್ರೆ 2.0 ಶುರುವಾಗುತ್ತಿದೆ. ಇದನ್ನ ಹೇಗೆ ತಡೆಯಬೇಕು, ಕಳೆದ ಬಾರಿ ಕೊರೋನಾ ಗೈಡ್ ಲೈನ್ಸ್‌ನಿಂದ ತಡೆಯಲಾಯ್ತು. ಆದ್ರೆ ಈ ಬಾರಿ ಯಾವ ವಿಷಯವನ್ನು ಇಟ್ಕೊಂಡು ಪಾದಯಾತ್ರೆ ತಡೆಯಬೇಕೆಂದು ಕಾರ್ಯತಂತ್ರ ರೂಪಿಸಲಿದೆ. ಒಂದ್ವೇಳೆ ಕಾಂಗ್ರೆಸ್ ಮತ್ತೆ ಹೋರಾಟಕ್ಕೆ ಮುಂದಾದರೆ ಅಧಿವೇಶನವನ್ನು ಸೋಮವಾರವೇ ಅನಿರ್ದಿಷ್ಟ ಅವಧಿಗೆ ಮುಂದೂಡುವ ಸಾಧ್ಯತೆ ಇದೆ.

Exit mobile version