Site icon PowerTV

‘ಕೈ’ ಕಾಲಹರಣ ಮಾಡ್ತಿದೆ: ಆರಗ ಜ್ಞಾನೇಂದ್ರ

ಕಲಬುರಗಿ : ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಮಕ್ಕಳಿಗೆ ಸಮಾನತೆ, ಸಂಸ್ಕಾರ ತುಂಬುವ ಕೆಲಸ ಆಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ನಮ್ಮ ಧರ್ಮ, ಜಾತಿ ಒಂದೇ ಅಂತಾ ತೋರಿಸಬೇಕು. ಕೋರ್ಟ್ ಆದೇಶದ ಪ್ರಕಾರ ನಡೆದುಕೊಳ್ಳಬೇಕು. ಕೆಲ ಕಾಲೇಜುಗಳಲ್ಲಿ ಇನ್ನೂ ಹಿಜಾಬ್ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗ್ತಿದೆ. ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಕಾಂಗ್ರೆಸ್ ಕಾಲಹರಣ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version