Site icon PowerTV

ಬಿಜೆಪಿ ಸದಸ್ಯರಿಂದ ಕೊಲೆ ಬೆದರಿಕೆ; ಕಾಂಗ್ರೆಸ್ ಆರೋಪ

ಬೆಂಗಳೂರು: ಬಿಜೆಪಿ ಸದಸ್ಯರಿಂದ ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಸಭಾಪತಿಗೆ ವಿಧಾನ ಪರಿಷತ್​ಗೆ ಕಾಂಗ್ರೆಸ್ ಪಕ್ಷದ​ ಪರಿಷತ್​ ಸದಸ್ಯರು ಪತ್ರ ಬರೆದಿದ್ದಾರೆ. ಬಿ.ಕೆ.ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಭಾಪತಿಗಳಾದ ತಾವು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಸೂಕ್ತ ಕ್ರಮವಹಿಸುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ. ಕಾರ್ಯದರ್ಶಿ ಮೂಲಕ ಪೊಲೀಸ್ ಇಲಾಖೆಗೆ ಪತ್ರವನ್ನು ರವಾನಿಸಿ, ರಕ್ಷಣೆ ಕೊಡಿಸಲು ಸಭಾಪತಿ ಸೂಚನೆ ನೀಡಿದ್ದಾರೆ. ‘ಕಾಂಗ್ರೆಸ್​ನವರಿಗೆ ದನಿಯೆತ್ತಲು ಬಿಡಬೇಡಿ’ ಎಂದು ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಇದು ಪರೋಕ್ಷವಾಗಿ ಕೊಲೆ ಬೆದರಿಕೆಗೆ ಪ್ರಚೋದನೆ ಮಾಡಿದಂತೆ ಇದೆ. ನಮಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ಕೊಡಿ ಎಂದು ಹರಿಪ್ರಸಾದ್ ವಿನಂತಿಸಿದರು.

Exit mobile version