Site icon PowerTV

ವಿಧ್ಯಾರ್ಥಿಗಳಿಗೆ ಅಶೋಕ್​​ ಎಚ್ಚರಿಕೆ

ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಕೋರ್ಟ್ ಆದೇಶ ಧಿಕ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬರುತ್ತಿದೆ. ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಸಮರ್ಥ ಆಗಿಲ್ಲ ಎನ್ನುವ ಭಾವನೆ ವಿದ್ಯಾರ್ಥಿಗಳು, ಪೋಷಕರಲ್ಲಿ ಬೇಡ ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದರು.

ಕಾರ್ಕಳದಲ್ಲಿ ಬ್ರಹತ್ ಕಂದಾಯ ಮೇಳ ಉದ್ಘಾಟಿಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಎಳೆಯ ವಯಸ್ಸಿನ ಮುಗ್ಧ ವಿದ್ಯಾರ್ಥಿಗಳು ಎಂದು ಕಠಿಣ ಕ್ರಮಕ್ಕೆ ಏಕಾಏಕಿ ಮುಂದಾಗಿಲ್ಲ. ಮಕ್ಕಳಿಗೆ ತಿಳುವಳಿಕೆ ಇದ್ದೂ ಪ್ರತಿಭಟನೆ ನಡೆಸುತ್ತಾರೆ ಎಂದಾದರೆ ನಾವು ಸಹ ಕಠಿಣ ಕ್ರಮ ಜರುಗಿಸಲು ಮುಂದಾಗುತ್ತೇವೆ. ಯಾವ ಬೆದರಿಕೆ, ಪ್ರತಿಭಟನೆ ತಂತ್ರಗಾರಿಕೆಗೆ ಸರಕಾರ ಬಗ್ಗುವುದಿಲ್ಲ ಎಂದು ಅಶೋಕ್​​ ಎಚ್ಚರಿಕೆ ನೀಡಿದ್ದಾರೆ.

Exit mobile version