Site icon PowerTV

ಮಾಜಿ‌ ಸಿಎಂ ಹೆಚ್‌ಡಿ‌ಕೆಗೆ ಸ್ವಕ್ಷೇತ್ರದಲ್ಲೇ ಬಿಗ್ ಶಾಕ್..!

ರಾಮನಗರ : ಕಳೆದ 25 ವರ್ಷದಿಂದ ಪಕ್ಷದ ಪ್ರಾಮಾಣಿಕ ಶ್ರಮಿಸಿದ್ದ ಹಾಗೂ ಪಕ್ಷ ಸಂಘಟಿಸಿದ್ದ ಕಾರ್ಯಕರ್ತರಿಂದ ಮಾಜಿ‌ ಸಿಎಂ ಹೆಚ್.ಡಿ‌.ಕುಮಾರಸ್ವಾಮಿಗೆ ಬಿಗ್ ಶಾಕ್ ನೀಡಿದ್ದಾರೆ.

ಸ್ವಕ್ಷೇತ್ರದಲ್ಲಿ ತೆನೆ  ಕೆಳಗಿಳಿಸುತ್ತಿರುವ 50 ಕ್ಕೂ ಹೆಚ್ವು ಪ್ರಮಾಣಿಕ ಕಾರ್ಯಕರ್ತರು. ಎಲೆಕ್ಷನ್​​ಗೆ ಇನ್ನೂ ಒಂದೂವರೆ ವರ್ಷ ಬಾಕಿ‌ ಇರುವಾಗಲೇ ತೆನೆ ಕೆಳಗಿಳಿಸಿ ಕಮಲ ಹಿಡಿಯಲು ಸಿದ್ದ ಎನ್ನುತ್ತಿರೋ ಕಾರ್ಯಕರ್ತರು. ನಿಷ್ಟಾವಂತ ಕಾರ್ಯಕರ್ತರ ಸಮಸ್ಯೆಗಳು ಕೇಳುತ್ತಿಲ್ಲವೆಂದು ಪ್ರಮಾಣಿಕ ಕಾರ್ಯಕರ್ತರಿಂದ ಆರೋಪ ಮಾಡುತ್ತಿದ್ದಾರೆ.

ಕಳೆದ 1 ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟಿರೋ ಸಿಪಿವೈ. ಪ್ರತಿ ಹಳ್ಳಿ ಹಳ್ಳಿಗಳಿಗೂ ತೆರಳಿ ಜನರ ನೋವನ್ನ ಕೇಳುತ್ತಿದ್ದಾರೆ. ಹಾಗಾಗೀ ಹೆಚ್‌ಡಿಕೆ ಇಂದ ಬೇಸತ್ತ ಕಾರ್ಯಕರ್ತರಿಗೆ ಗಾಳ ಹಾಕುತ್ತಿರುವ ಯೋಗೇಶ್ವರ್. ಕ್ಷೇತ್ರದ ಪ್ರಮುಖ ಮುಂಚೂಣಿ ಜೆಡಿಎಸ್ ನಾಯಕರು ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ಸೋಮವಾರ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ‌ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಲಿದೆ.

ಜೆಡಿಎಸ್ ಕಾರ್ಯಕರ್ತರ ರಾಜೀನಾಮೆ ಹಿನ್ನೆಲೆ‌ ಕ್ಷೇತ್ರ ಪ್ರವಾಸ ಕೈಗೊಂಡ ಹೆಚ್‌ಡಿಕೆ. ಅಧಿವೇಶನ ನಡೆಯುತ್ತಿದ್ದರೂ ಸಹ ಕ್ಷೇತ್ರದತ್ತ ಮುಖ‌ ಮಾಡಿದ ಕುಮಾರಸ್ವಾಮಿ. ಪ್ರಾಮಾಣಿಕ ನಾಯಕರ ರಾಜೀನಾಮೆ ಹಿಂದ ಆತಂಕಗೊಂಡು ಕ್ಷೇತ್ರ ಪ್ರವಾಸ ಕೈಗೊಂಡಿರುವ ಹೆಚ್‌ಡಿಕೆ.ಇಂದು ಸಂಪೂರ್ಣ ಕ್ಷೇತ್ರ ಪ್ರವಾಸ ಮಾಡಲಿದ್ದಾರೆ.

ವಿವಿಧ ಗ್ರಾಮಗಳಿಗೆ ಭೇಟಿ‌ ನೀಡಿ ಕಾರ್ಯಕರ್ತರ ಹಾಗೂ ಜನರ ಸಮಸ್ಯೆ ಆಲಿಸಲಿರುವ ಕುಮಾರಸ್ವಾಮಿ.ಸದ್ಯ
ಮಾಜಿ ಸಿಎಂ ಕುಮಾರಸ್ವಾಮಿಗೆ ಸಾರ್ವತ್ರಿಕ ಚುನಾವಣೆ ಟೆನ್ಷನ್ ಶುರುವಾಗಿದೆ.

Exit mobile version