Site icon PowerTV

ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ – ಸಚಿವ ಈಶ್ವರಪ್ಪ

ಬೆಂಗಳೂರು : ಪ್ರತಿ ಪಕ್ಷ ಕಾಂಗ್ರೆಸ್‍ನವರು ನನ್ನ ವಿರುದ್ಧ ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ನಾನು ಎಲ್ಲಿಯೂ ಅಪಮಾನ ಮಾಡಿಲ್ಲ. ನಾನು ಅಪ್ಪಟ ದೇಶಭಕ್ತ. ತ್ರಿವರ್ಣ ಧ್ವಜದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಕಾಂಗ್ರೆಸ್‍ನವರು ರಾಜೀನಾಮೆ ಕೊಡು ಎಂದು ಕೇಳಿದ ತಕ್ಷಣ ನಾನೇಕೆ ಕೊಡಲಿ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ಕಾಂಗ್ರೆಸ್‍ನವರು ಪ್ರತಿಭಟನೆಯನ್ನಾದರೂ ಮಾಡಲಿ, ಇನ್ನೇನಾದರೂ ಮಾಡಲಿ. ಅದಕ್ಕೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಇವರಿಗೆ ಹೆದರಿ ನಾನು ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಏನಾಗುತ್ತದೆಯೋ ಹಾಗೆಯೇ ಬಿಡಲಿ ಎಂದು ಸವಾಲು ಹಾಕಿದರು.

Exit mobile version