Site icon PowerTV

ಹಿಜಾಬ್ ವಿವಾದ ಶುರುವಾಗಿದ್ದು ಸರ್ಕಾರದಿಂದ: ಡಿಕೆ ಸುರೇಶ್

ಬೆಂಗಳೂರು: ಹಿಜಬ್ ವಿವಾದ ನ್ಯಾಯಾಲಯದಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆಯಂತೆ ಮಕ್ಕಳಿಗೆ ಶಿಕ್ಷಣ ಕೊಡುವುದು ಹಾಗೂ ಹೆಣ್ಣುಮಕ್ಕಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಹಾಸನದ ಸಂಸದ ಡಿಕೆ ಸುರೇಶ್ ಹೇಳಿದರು.

ಸಂವಿಧಾನವನ್ನು ಉಳಿಸಬೇಕಾಗಿರುವುದು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡಿರುವ ಎಲ್ಲಾ ಪ್ರತಿನಿಧಿಗಳ ಜವಾಬ್ದಾರಿ. ಹಿಜಬ್ ವಿಚಾರ ರಾಜಕೀಯ ಮಾಡುತ್ತಿರುವುದೇ ಬಿಜೆಪಿಯವರು. ಇದು ಪ್ರಾರಂಭವಾಗಿರುವುದು ಬಿಜೆಪಿ ಅಂಗ ಸಂಸ್ಥೆಗಳಿಂದ ಎಂದರು.ಹಿಜಬ್-ಕೇಸರಿ ವಿವಾದ ಏಕಾಏಕಿ ಬಂದಿಲ್ಲ. ಕೇಸರಿ ವಿವಾದ ಸೃಷ್ಟಿ ಮಾಡಿರುವುದು ಸರ್ಕಾರವೇ ಹೊರತು ಬೇರೆ ಯಾರೂ ಅಲ್ಲ. ಫೆಬ್ರವರಿ 5ರ ವರೆಗೆ ಒಂದು ಆದೇಶವಿತ್ತು. ಬಳಿಕ ಆದೇಶ ಬದಲಾವಣೆಯಾಗಿದ್ದರಿಂದ ರಾಜ್ಯ-ರಾಷ್ಟ್ರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಈ ಗೊಂದಲವನ್ನು ಸರಿಪಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

Exit mobile version