Site icon PowerTV

ಈಶ್ವರಪ್ಪಗೆ ಖಾದರ್​​ ಚಾಟಿ

ಬೆಂಗಳೂರು : ತ್ರಿವರ್ಣ ಧ್ವಜದ ಜಾಗದಲ್ಲಿ ಭಗವಾಧ್ವಜ ಹಾರಲಿದೆ ಎಂಬ ಸಚಿವ ಕೆ ಎಸ್‌ ಈಶ್ವರಪ್ಪ ಅವರ ಹೇಳಿಕೆ ಭಾರತ ಮಾತೆಗೆ ಮಾಡಿದ ದ್ರೋಹ ಎಂದು ಮಾಜಿ ಸಚಿವ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ಮಾತನ್ನ ಎಲ್ಲರೂ ಖಂಡಿಸುತ್ತಾರೆ. ಒಬ್ಬ ಹಿರಿಯ ನಾಯಕರಿಗೆ ಇದು ಶೋಭೆ ತರುವುದಿಲ್ಲ. ರಾಷ್ಟ್ರಧ್ವಜ ಈ ದೇಶದ ಮಣ್ಣಿನ ತ್ಯಾಗ. ಅದರ ಹಿಂದೆ ಹಲವು ಧ್ಯೇಯೋದ್ದೇಶಗಳಿವೆ.

ಈಶ್ವರಪ್ಪ ಹಿರಿಯರಾಗಿ‌ ಮಾತನಾಡಿರಬಹುದು. ಆದರೆ, ಬಿಜೆಪಿ ನಾಯಕರು‌ ಅದಕ್ಕೆ ಸಮ್ಮತಿಸಿದ್ದಾರೆ. ನಿಜವಾದ ದೇಶಪ್ರೇಮ ಇದ್ದರೆ ಎಲ್ಲರೂ ಖಂಡಿಸಬೇಕು ಎಂದು ಆಗ್ರಹಿಸಿದರು. ಹಿಜಾಬ್ ಬಗ್ಗೆ ಹೊರಗಿನವರು ಮಧ್ಯಪ್ರವೇಶ ಮಾಡಬಾರದು ಹೆತ್ತವರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು‌.

Exit mobile version