Site icon PowerTV

‘12 ಮಕ್ಕಳಿಗೆ ಟ್ರೈನಿಂಗ್ ನೀಡಲಾಗಿದೆ’ : ರಘುಪತಿ ಭಟ್

ಕರ್ನಾಟಕದ ಹಿಜಾಬ್ ವಿವಾದ ಈಗ ದೇಶದ ಉಳಿದ ರಾಜ್ಯಗಳಿಗೂ ಹರಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ.

ಹಿಜಾಬ್ ವಿವಾದದ ಬಗ್ಗೆ ಶಾಸಕ ರಘುಪತಿ ಭಟ್ ಮಾತನಾಡಿದ್ದು, ಐಸಿಸಿ ಉಗ್ರ ಸಂಘಟನೆ ಇದರ ಹಿಂದೆ ಇರುವ ಬಗ್ಗೆ ನಂಗೆ ನಿಖರ ಮಾಹಿತಿ ಇಲ್ಲ. ನನಗೆ ಇರುವ ಮಾಹಿತಿಗಳು ಈ ಹೆಣ್ಣು ಮಕ್ಕಳಿಗೆ ಟ್ರೈನಿಂಗ್ ಕೊಟ್ಟಿದ್ದು, ಅದರ ಹಿಂದೆ ಏನೇನೋ ವ್ಯವಸ್ಥೆ ಆಗಿದೆ. ಅದರ ಬಗ್ಗೆ ಇದ್ದ ಮಾಹಿತಿಯನ್ನು ನಾನು ಸರ್ಕಾರಕ್ಕೆ ನೀಡಿದ್ದೇನೆ. ಸರ್ಕಾರ ತನಿಖೆಯನ್ನು ಮಾಡಿ ಮಾಹಿತಿ ಕಲೆಹಾಕುವುದನ್ನು‌ ಪ್ರಾರಂಭ ಮಾಡಿದ್ದಾರೆ. ಯಾವ ಸಂಘಟನೆ ಟ್ರೈನಿಂಗ್ ಕೊಟ್ಟಿದೆ ಗೊತ್ತಿಲ್ಲ. 12 ಮಕ್ಕಳಿಗೆ ಟ್ರೈನಿಂಗ್ ನೀಡಿದ್ದು ಖಂಡಿತ ಆ ಬಗ್ಗೆ ಮಾಹಿತಿ ಇದೆ. ಟ್ರೈನಿಂಗ್ ಪಡೆದು ಬಂದ ನಂತ್ರ ಆ 12 ಮಕ್ಕಳಿಗೆ ಹಿಂದೂ ಮಕ್ಕಳನ್ನು ನೋಡುವಾಗ ಆಕ್ರೋಶ ಬರುವ ಮಟ್ಟಿಗೆ ಅವರ ತಲೆಗೆ ತುಂಬಿಸಿದ್ದಾರೆ..ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಮಾಹಿತಿಗಳು ಎಲ್ಲಾ ಇದ್ದು, ತನಿಖೆಯಲ್ಲಿ ಗೊತ್ತಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.

Exit mobile version