Site icon PowerTV

ರಾಷ್ಟ್ರೀಯ ಪಕ್ಷಗಳ ವಿರುದ್ಧ ಕನ್ನಡದ ಅಸ್ತ್ರ ಬಳಸಲು ಮುಂದಾದ ಜೆಡಿಎಸ್..!

ಬೆಂಗಳೂರು : ರಾಷ್ಟ್ರೀಯ ಪಕ್ಷಗಳ ವಿರುದ್ಧ ಕನ್ನಡದ ಅಸ್ತ್ರ ಬಳಸಲು ಜೆಡಿಎಸ್ ಪಕ್ಷವು ಮುಂದದಾಗಿದೆ.

ಹಿಜಾಬ್ ಕೆಸರೆರಚಾಟದಲ್ಲೊ ಕಾಂಗ್ರೆಸ್, ಬಿಜೆಪಿ ಮುಳುಗಿರುವ ಹೊತ್ತಲ್ಲೇ ಸದ್ದಿಲ್ಲದೆ ಕನ್ನಡದ ಅಸ್ತ್ರ ಪ್ರಯೋಗ ಮಾಡುತ್ತಿದೆ ಜನತಾದಳ ಪಕ್ಷವು. ಚುನಾವಣೆಗೆ ಒಂದು ವರ್ಷವಿರುವಾಗಲೇ ಕನ್ನಡದ ಅಸ್ತ್ರ ಪ್ರಯೋಗ, ನಾಡು, ನುಡಿ ವಿಚಾರವಾಗಿ ಜೆಡಿಎಸ್ ಬದ್ಧತೆ ಹೊಂದಿದೆ ಎಂಬ ಸಂದೇಶ ಕೊಡಲು ಹೊರಟಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

ಕನ್ನಡಪರ ಸಂಘಟನೆಗಳಿಗೆ ಆಹ್ವಾನ ನೀಡುವುದರೊಂದಿಗೆ ಕನ್ನಡದ ಅಸ್ಮಿತೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಭಾವನಾತ್ಮಕ ವಿಚಾರದಲ್ಲಿ ಕೋಮುಭಾವನೆ ಕೆರಳಿಸುತ್ತಿವೆ ಎಂಬ ಟೀಕೆ ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕೆ ಮಾಡುತ್ತಲೇ ಪ್ರಾದೇಶಿಕತೆಯನ್ನ ಒತ್ತಿ ಹೇಳುತ್ತಿರುವ ಮಾಜಿ ಸಿಎಂ ಹೆಚ್ ಡಿ ಕೆ.

ಇದೀಗ ಕನ್ನಡಪರ ಹಾಗೂ ರೈತ ಸಂಘಟನೆಗಳಿಗೆ ಆಹ್ವಾನ ನೀಡಿರುವ ಕುಮಾರಸ್ವಾಮಿ. ಅಲ್ಲದೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಭರವಸೆ ಕೊಡುವ ಮೂಲಕ ರಾಜಕೀಯಕ್ಕೆ ಆಹ್ವಾನ. ಚುನಾವಣಾ ಕಣಕ್ಕಿಳಿದರೆ ಪಕ್ಷದ ಸ್ಥಳೀಯ ಕಾರ್ಯಕರ್ತರ ಬೆಂಬಲದ ಅಭಯ ನೀಡಿದ್ದಾರೆ. ಹಾಗೂ ಕುಮಾರಸ್ವಾಮಿಯ ಈ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Exit mobile version