Site icon PowerTV

ಪ್ರಿಯಾಂಕ ಗಾಂಧಿಗೆ ಟಾಂಗ್​ ನೀಡಿದ ಹೊರಟ್ಟಿ

ಧಾರವಾಡ: ಬಿಕಿನಿ ಬಗ್ಗೆ ಪ್ರಿಯಾಂಕಾ ಗಾಂಧಿ ಟ್ವೀಟ್​ ಮಾಡಿದ ವಿಚಾರವಾಗಿ ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಅವರವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳಿಕೆಯನ್ನು ಕೊಡುತ್ತಾರೆ ಎಂದರು.

ಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು ಅಂತಾ ತಂದೆ-ತಾಯಿ ಕಲಿಸಬೇಕು. ಪ್ರಿಯಾಂಕಾ ಕೂಡಾ ತಾಯಿಯ ಸ್ಧಾನದಲ್ಲಿದ್ದಾರೆ. ಅಂಥವರು ಬಿಕಿನಿ ಬಗ್ಗೆ ಹೇಳುವುದು ತಪ್ಪು. ಎಲ್ಲರಿಗೂ ಇದೆ ಆದರೆ ಯಾವ ಯಾವ ಜಾಗಕ್ಕೆ ಏನಿರಬೇಕೋ ಅದು ಇರಬೇಕು ಎಂದರು. ಸಮುದ್ರ ದಂಡೆಯಲ್ಲಿ ಬಿಕಿನಿ ಹಾಕಿಕೊಂಡರೆ ಯಾರು ಕೇಳುತ್ತಾರೆ. ಹಾಗಂತ ಕಾಲೇಜಿಗೆ ಬಿಕಿನಿ ಹಾಕಿಕೊಂಡು ಹೋಗಿ ಅಂದರೆ ಹೇಗೆ ? ಅಂತ ಪ್ರಿಯಾಂಕಾ ಗಾಂಧಿಗೆ ಬಸವರಾಜ್​ ಹೊರಟ್ಟಿ ಟಾಂಗ್​ ಕೊಟ್ಟಿದ್ದಾರೆ.

Exit mobile version