Site icon PowerTV

ಮೋದಿ ರಾಜೀನಾಮೆ ಕೊಟ್ಟು ತೊಲಗಬೇಕು‌ : ಸಿದ್ದರಾಮಯ್ಯ

ಬೆಂಗಳೂರು : ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾ ಹೇಳುತ್ತಾರೆ ಆದರೆ ದೇಶ ವಿನಾಶದ ಕಡೆ ಸಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದೇಶದಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಯಾಕೆ ಅಂತ ಉತ್ತರ ಕೊಡಬೇಕು ಅಲ್ಲವೇ ದೇಶದ ಮೇಲೆ ಇಂದು ಸಾಲ ಹೆಚ್ಚಾಗಿದೆ ಇದೇನಾ ಸಬ್ ಕಾ ವಿಕಾಸ್ ಅಂದ್ರೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶ ೫೩ ಲಕ್ಷದ ೧೧ ಸಾವಿರ ಕೋಟಿ ಸಾಲ ಇತ್ತು. ನಂತರ ಮೋದಿ ಸರ್ಕಾರ ಬಂತು ಇವಾಗ ೧೩೫ ಲಕ್ಷದ ೮೭ ಸಾವಿರ ಕೋಟಿ ಸಾಲ ಇದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಭಾವಿಸಿಯೇ ಈ ಭಾವನಾತ್ಮಕ ವಿಷಯಗಳನ್ನ ತಂದಿದ್ದಾರೆ
ಇದನ್ನೆಲ್ಲಾ ಯುವಕರು ಅರ್ಥ ಮಾಡಿಕೊಳ್ಳಬೇಕು, ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಮೋಸ ಮಾಡಿದ್ದಾರೆ. ಸರಿಯಾಗಿ ಯಾರಿಗೂ ಪರಿಹಾರ ನೀಡಿಲ್ಲ. ರೈತರ ವಿರುದ್ಧದ ಮೂರು ಕಾಯ್ದೆಗಳನ್ನ ತಂದರು ಒಂದು ವರ್ಷ ರೈತರು ಹೋರಾಟ ಮಾಡಿದ್ರು ವಾಪಾಸ್ ಪಡೆಯಲಿಲ್ಲ.

ಮೋದಿ ದೇಶವನ್ನೇ ಹಾಳು ಮಾಡಿಬಿಟ್ಟರು. ಹಾಗಾಗಿ ನೀವಾಗಿ ನೀವೇ ರಾಜೀನಾಮೇ ಕೊಟ್ಟು ತೊಲಗಬೇಕು‌ ಎಂದು ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Exit mobile version