Site icon PowerTV

ಕಾಂಗ್ರೆಸ್ ಪಕ್ಷವು ಮುಸ್ಲಿಂ ಪಾರ್ಟಿ : ಶಾಸಕ ಯತ್ನಾಳ್

ವಿಜಯಪುರ : ಕಾಂಗ್ರೆಸ್​​ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​​​ನಿಂದ ದೇಶದ ರಕ್ಷಣೆ ಆಗಲ್ಲ. ಕಾಂಗ್ರೆಸ್​​ ಪಕ್ಷವು ಯಾವಗಲೂ ತುಕುಡೆ ತುಕುಡೆ ಅನ್ನೋ ಗ್ಯಾಂಗ್​​​ಗಳಿಗೆ ಮಾತ್ರ ಬೆಂಬಲ‌ ಕೊಡುತ್ತದೆ. ಆದರೆ ಈ ತುಕುಡೆ ತುಕುಡೆ ಗ್ಯಾಂಗ್ ಪಾಕಿಸ್ತಾನಿ ಐಎಸ್‌ಐಗೆ ಬೆಂಬಲ‌ ಕೊಡೊದೆ ಇದರ ಕೆಲಸ. ಹಿಜಾಬ್ ವಿವಾದ ಬಳಿಕ ಇವರ ಬಣ್ಣ ಬಯಲಾಗುತ್ತಿದೆ. ಹಿಜಾಬ್ ಗದ್ದಲ ಎಬ್ಬಿಸಿದವರು ದೇಶಕ್ಕೆ ಒಂದಿಲ್ಲ ಒಂದು ದಿನ ಮಾರಕವಾಗುತ್ತಾರೆ. ಇಂತಹ ದೇಶದ್ರೋಹ ಕೆಲಸ ಮಾಡುವರನ್ನು ಇಲ್ಲಿಗೆ ಬಿಡಬಾರದು, ಇವರನ್ನ ಬಗ್ಗು ಬಡಿಯಲೇಬೇಕು ಎಂದು ಕಿಡಿಕಾರಿದ್ದರು.

ಇನ್ನುಈ ವಿವಾದದಲ್ಲಿ ಇರುವ ಸರ್ಕಾರಿ ನೌಕರರ ಸೌಲಭ್ಯ ಕಟ್ ಮಾಡಬೇಕು. ಗೃಹ ಇಲಾಖೆ ಎಲ್ಲವನ್ನ ಗಮನಿಸುತ್ತಿದೆ, ಹೈಕೋರ್ಟ್ ತೀರ್ಮಾನದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಇನ್ನು, ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಟ್ರೇನಿಂಗ್ ವಿಚಾರವಾಗಿ ಉಡುಪಿ ಶಾಸಕರು ಸಾಕಷ್ಟು ವಿಷಯಗಳನ್ನು ಬಹಿರಂಗ ಪಡೆಸಿದ್ದಾರೆ. ಇಷ್ಟು ದಿನ ಯುವತಿಯರು ಹಿಜಾಬ್ ಹಾಕುತ್ತಿರಲಿಲ್ಲ ಇದಕ್ಕೆ ಸಾಕ್ಷಿಯಾಗಿ ಶಾಸಕರು ಪೋಟೋ ನೀಡಿದ್ದಾರೆ. ಈ ಹಿಜಾಬ್​​ ವಿವಾದವು ಉದ್ದೇಶ ಪೂರ್ವಕವಾಗಿ ನಡೆಯುತ್ತಿವೆ. ಕರಾವಳಿ ಭಾಗದಲ್ಲಿ ದೇಶ ವಿರೋಧಿ ಚಟುವಟಿಕೆ ಸಂಘಟನೆ ಹೆಚ್ಚಾಗಿವೆ. ಹೀಗಾಗಿ ಗೃಹ ಇಲಾಖೆ ಒಳ್ಳೆಯ ಅಧಿಕಾರಿಗಳನ್ನ ನೇಮಕ‌ ಮಾಡುತ್ತಿದೆ ಎಂದು ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version