Site icon PowerTV

ಹಿಜಾಬ್ ಗದ್ದಲಕ್ಕೆ ನೇರ ಕಾರಣ ಕಾಂಗ್ರೆಸ್ : ಕೆಎಸ್ ಈಶ್ವರಪ್ಪ

ದಾವಣಗೆರೆ : ರಾಜ್ಯದಲ್ಲಿ ಹಿಜಾಬ್ ಗದ್ದಲಕ್ಕೆ ನೇರ ಕಾರಣ ಕಾಂಗ್ರೆಸ್ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಕಾಂಗ್ರೆಸ್ ವಿರುದ್ಧ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಾಲೆ ಅಂದ್ರೆ ಸಮಾನತೆ ಹಾಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರಬೇಕು. ಆದ್ದರಿಂದ ಎಲ್ಲರೂ ಸಮವಸ್ತ್ರದಲ್ಲಿ ಬಂದ್ರೆ ಸಾಕು. ಅದು ಬಿಟ್ಟು ಹಿಜಾಬ್ ವಿಚಾರದಲ್ಲಿ ಗದ್ದಲ ಸರಿಯಲ್ಲ ಎಂದು ಹೇಳಿದರು. ಹಿಂದು ಮುಸ್ಲಿಂ ನಡುವೆ ಜಗಳ ಹಚ್ಚಿ ಕಾಂಗ್ರೆಸ್ ಸರ್ವನಾಶವಾಗಿದೆ. ಉಡುಪಿಯ ಶಾಲೆಯ ಬಹುತೇಕ ಮಕ್ಕಳು ಸಮವಸ್ತ್ರದಲ್ಲಿ ಬರಲು ಒಪ್ಪಿದ್ದಾರೆ. ಆದ್ರೆ ಆರು ಮಕ್ಕಳಿಂದ ಇದು ವಿವಾದವಾಗಿದೆ ಎಂದು ಕಿಡಿಕಾರಿದ್ದಾರೆ.

ಹಿಜಾಬ್ ಬೇಡ ಆದ್ರೆ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವುದನ್ನ ಕೆಲವರು ಪ್ರಶ್ನಿಸುತ್ತಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿ ಇದು ‘ಹಿಂದುಸ್ತಾನ’ ನಾವು ಇಲ್ಲೇ ಸರಸ್ವತಿ ಪೂಜೆಯನ್ನು ಮಾಡಬೇಕು. ಅದನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿ‌ ಸರಸ್ವತಿ ಪೂಜೆ ಮಾಡಲು ಆಗುತ್ತಾ ಎಂದು ಕೆಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

Exit mobile version