Site icon PowerTV

ಭಾರತ ತಂಡವನ್ನು ಪ್ರಶಂಸಿದ ಸೌರವ್ ಗಂಗೂಲಿ

ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದಿಸಿದ್ದಾರೆ.

ಇದೇ ವೇಳೆ ಆಟಗಾರರಿಗೆ 40 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ತಂಡವನ್ನು ಅಭಿನಂದಿಸಿ ಟ್ವೀಟಿಸಿರುವ ಗಂಗೂಲಿ ‘ಅತ್ಯುತ್ತಮ ರೀತಿಯ ಪ್ರದರ್ಶನದ ಮೂಲಕ ವಿಶ್ವಕಪ್ ಗೆದ್ದಿರುವ 19 ವರ್ಷದೊಳಗಿನ ತಂಡ, ಸಿಬ್ಬಂದಿ ಹಾಗೂ ಆಯ್ಕೆದಾರರಿಗೆ ಅಭಿನಂದನೆಗಳು. ಅವರಿಗೆ ಪ್ರೋತ್ಸಾಹಕವಾಗಿ ನಾವು 40 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದೇವೆ. ಆದರೆ, ಅವರ ಪ್ರಯತ್ನ ಬೆಲೆ ಕಟ್ಟಲಾರದಂಥದ್ದು.’ ಎಂದು ಬಿಸಿಸಿಐನ ಟ್ಯಾಗ್ ಮಾಡಿ ಪ್ರಕಟಿಸಿದ್ದಾರೆ.

Exit mobile version