Site icon PowerTV

ಲತಾ ಮಂಗೇಶ್ಕರ್​ಗೆ ಸಂತಾಪ ಸೂಚಿಸಿದ ಪಾಕ್​ ಸಚಿವ:ಫವಾದ್ ಚೌಧರಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವ ಫವಾದ್ ಚೌಧರಿ (Fawad Chaudhry) ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು “ಅವರು ಸಂಗೀತ ಜಗತ್ತನ್ನು ಆಳಿದ ಗಾಯಕಿ” ಎಂದು ಹೇಳಿದ್ದಾರೆ.

“ದಂತಕಥೆ ಇನ್ನಿಲ್ಲ, ಲತಾಮಂಗೇಶ್ಕರ್ ಅವರು ಸಂಗೀತದ ಜಗತ್ತನ್ನು ದಶಕಗಳ ಕಾಲ ಆಳಿದ ಸುಮಧುರ ರಾಣಿಯಾಗಿದ್ದರು. ಅವರು ಸಂಗೀತ ಜಗತ್ತಿನಲ್ಲಿ ಕಿರೀಟವಿಲ್ಲದ ರಾಣಿಯಾಗಿದ್ದರು. ಅವರ ಧ್ವನಿಯು ಎಲ್ಲಾ ಕಾಲಕ್ಕೂ ಜನರ ಹೃದಯವನ್ನು ಆಳುತ್ತಿರುತ್ತದೆ” ಎಂದು ಸಚಿವ ಫವಾದ್ ಚೌಧರಿ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version