Site icon PowerTV

ಕಾಂಗ್ರೆಸ್​ನಲ್ಲಿ ಶುರುವಾಗಿದೆ ಟಿಕೆಟ್ ಫೈಟ್

ತುಮಕೂರು:ಡಿಕೆ ಶಿವಕುಮಾರ ಸಂಬಂಧಿ ಹಾಲಿ ಶಾಸಕ ಡಾ.ರಂಗನಾಥ್ ಇದ್ದರೂ ನನಗೆ ಟಿಕೆಟ್ ಸಿಗಲಿದೆ ಎಂದು ಮಾಜಿ ಎಂಪಿ ಮುದ್ದಹನುಮೇಗೌಡ ಭರವಸೆ ವ್ಯಕ್ತಪಡಿಸಿದ್ದಾರೆ.

ದೇವೇಗೌಡರಿಗಾಗಿ ಲೋಕಸಭೆ ಟಿಕೆಟ್ ತ್ಯಾಗ ಮಾಡಿದ್ದ ಮುದ್ದಹನುಮೇಗೌಡ ಲೋಕಸಭೆಗೆ ಚುನಾವಣೆಯಲ್ಲಿ ನನ್ನ ಸ್ಥಾನವನ್ನು ಪಕ್ಕಕ್ಕಾಗಿ ತ್ಯಾಗ ಮಾಡಿದ್ದೆ.ಹಾಗಾಗಿ ಅನಿವಾರ್ಯವಾಗಿ ವಾಗಿ ನಾನು ವಿಧಾನ ಸಭೆಗೆ ಸ್ಪರ್ಧಿಸಬೇಕು.ನನ್ನ ಹುಟ್ಟೂರು, ನಾನು ವಿದ್ಯಾಭ್ಯಾಸ ಮಾಡಿದ ಊರು, ಎರಡು ಬಾರಿ ಶಾಸಕನಾದ ಕ್ಷೇತ್ರ ಕುಣಿಗಲ್ ನಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಕುಣಿಗಲ್ ಕ್ಷೇತ್ರದ ಜನರು ಕೂಡ ನಾನು ಸ್ಪರ್ಧಿಸುವಂತೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನನಗೆ ಅನ್ಯಾಯವಾಗಿದೆ.ಹಾಗಾಗಿ ಕುಣಿಗಲ್ ನಿಂದ ವಿಧಾನ ಸಭೆಗೆ ನಾನು ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಆದರೆ ನಾನು ಹಾಲಿ ಸಂಸದನಾಗಿದ್ದಾಗ ಯಾಕೆ ನನಗೆ ಟಿಕೆಟ್ ತಪ್ಪಿಸಿದ್ದರು.ಆಗ ನನ್ನ ರಕ್ಷಣೆಗೆ ಯಾಕೆ ಯಾರೂ ಬಂದಿಲ್ಲ.ಸಿಟ್ಟಿಂಗ್ ಎಮ್ ಎಲ್ ಎ ಯ ರಕ್ಷಣೆ ಮಾಡೋದಾದರೆ ಸಿಟ್ಟಿಂಗ್ ಎಂ.ಪಿ. ನಾ ಯಾಕೆ ರಕ್ಷಣೆ ಮಾಡಿಲ್ಲ.ಹಾಗಾದರೆ ಪಕ್ಷದಲ್ಲಿ ನ್ಯಾಯ ಎಲ್ಲಿದೆ.ನ್ಯಾಯ ಅಂದರೆ ಎಲ್ಲರಿಗೂ ಒಂದೇ ಅಲ್ವಾ ನಾನು ನನ್ನ ಸ್ಥಾನ ತ್ಯಾಗ ಮಾಡುವಾಗ ರಾಜ್ಯ ಸಭಾ ಸದಸ್ಯರಾಗಿ ಮಾಡೋದಾಗಿ ರಾಹುಲ್ ಗಾಂಧಿ ಹೇಳಿದ್ದರು.ಎರಡು ವಿಧಾನ ಪರಿಷತ್ ಸ್ಥಾನ ಬಂತು…ಅದನ್ನೂ‌ ಕೊಟ್ಟಿಲ್ಲ.ನನಗೆ ಪಕ್ಷದಿಂದ ಅನ್ಯಾಯವಾಗಿದೆ.ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಸಿಗದೇ ಇದ್ದರೆ ರಾಹುಲ್ ಗಾಂಧಿ ಬಳಿ‌ಹೋಗುತ್ತೇನೆ ಎಂದು ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಮಾಜಿ ಸಂಸದ ಮುದ್ದಹನುಮೆಗೌಡ ಹೇಳಿದ್ದಾರೆ.

Exit mobile version