Site icon PowerTV

ಪ್ರತಾಪ್​ ಸಿಂಹ ವಿರುದ್ಧ ರಾಜಣ್ಣ ವಾಗ್ದಾಳಿ

ಮಾಜಿ ಸಿಎಂ ಸಿದ್ದರಾಮಯ್ಯ, ಸಿದ್ದ ರಹಿಮ ಅಯ್ಯ ಎಂದು ಹೆಸರು ಬದಲಿಸಿಕೊಳ್ಳಲಿ ಎಂಬ ಮೈಸೂರು ಸಂಸದ ಪ್ರತಾಪ್​ ಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್​​ ಮುಖಂಡ ಕೆ.ಎನ್​ ರಾಜಣ್ಣ, ಪ್ರತಾಪ್ ಸಿಂಹ ಏನ್ ಸಿದ್ದರಾಮಯ್ಯ ಅವರ ಅಪ್ಪನಾ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯಗೆ ಹೆಸರಿಟ್ಟಿದ್ದು ಅವರ ತಂದೆ ತಾಯಿ. ಇವನು ಅವರ ಅಪ್ಪ ಆದಾಗ ಹೆಸರಿಟ್ಟುಕೊಳ್ಳಲಿ. ಪ್ರತಾಪ್ ಸಿಂಹ, ಸಿಂಹ ಅಲ್ಲದೇ ಇದ್ರೂ ಸಿಂಹ ಅಂತಾ ಯಾಕ್ ಇಟ್ಟುಕೊಂಡ? ಪ್ರತಾಪ್ ಸಿಂಹ ಹುಲಿನೂ ಅಲ್ಲಾ, ಬರೀ ಇಲಿ ಅವನು. ಅಂಕಣ ಬರೀತಾ ಇದ್ದ ಅಂತಾ ಬಿಜೆಪಿ ಟಿಕೆಟ್ ಕೊಟ್ರು. ಉತ್ತಮ ಕೆಲಸ ಮಾಡೊದು ಬಿಟ್ಟು ಇಲ್ಲಸಲ್ಲದರ ಬಗ್ಗೆ ಮಾತನಾಡುತ್ತಾನೆ ಎಂದು ಕೆ.ಎನ್.ರಾಜಣ್ಣ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.

Exit mobile version