Site icon PowerTV

ರಾಹುಲ್‌ ಗಾಂಧಿಗೆ ಗೋವಾ ‘ಕೈ’ ನಾಯಕರ ಮೇಲೆ ಅನುಮಾನ..!

ಗೋವಾದ ಕಾಂಗ್ರೆಸ್ ನಾಯಕರು ಹಾಗೂ ಉಸ್ತುವಾರಿಗಳ ವಿರುದ್ಧ ಆ ಪಕ್ಷದ ವರಿಷ್ಠರಿಗೆ ಅನುಮಾನ ಮೂಡಿದ್ಯಾ..?

ಇಂಥದ್ದೊಂದು ಪ್ರಶ್ನೆಗೆ ಪುಷ್ಠಿ ನೀಡಿದೆ ರಾಹುಲ್ ಗಾಂಧಿಯವರ ನಡೆ. ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಗೋವಾದ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷ ನಿಷ್ಠೆಯ ಶಪಥವನ್ನು ಸ್ವೀಕರಿಸಿದರು. ಐದು ವರ್ಷಗಳಲ್ಲಿ ಪಕ್ಷಾಂತರ ಚಟುವಟಿಕೆಗಳಿಂದಾಗಿ ಕಾಂಗ್ರೆಸ್ ಅತಿ ಹೆಚ್ಚಿನ ಸಮಸ್ಯೆಗೆ ಒಳಗಾಗಿದ್ದುದೇ ಇದಕ್ಕೆ ಕಾರಣವಾಗಿದೆ. 40 ಸದಸ್ಯ ಬಲದ ಗೋವಾದಲ್ಲಿ ಫೆಬ್ರುವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.

ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್, ಚುನಾವಣೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಪಕ್ಷವು 37 ಸೀಟುಗಳಲ್ಲಿ ಹಾಗೂ ಉಳಿದ ಮೂರು ಸ್ಥಾನಗಳಲ್ಲಿ ಗೋವಾ ಫಾರ್ವರ್ಡ್ ಪಕ್ಷ ಸ್ಪರ್ಧಿಸಲಿದೆ. ಗೋವಾಕ್ಕೆ ಆಗಮಿಸಿದ ರಾಹುಲ್ ಗಾಂಧಿ ಮನೆ-ಮನೆ ಪ್ರಚಾರದಲ್ಲಿ ಭಾಗಿಯಾದರು. ರಾಹುಲ್ ಉಪಸ್ಥಿತಿಯಲ್ಲಿ ಚುನಾವಣೆ ಗೆದ್ದರೆ ಮುಂದಿನ ಐದು ವರ್ಷಗಳಲ್ಲಿ ಪಕ್ಷ ತೊರೆಯುವುದಿಲ್ಲ ಎಂಬ ಶಪಥಪತ್ರಕ್ಕೆ ಅಭ್ಯರ್ಥಿಗಳು ಸಹಿ ಹಾಕಿದ್ದಾರೆ.

Exit mobile version