Site icon PowerTV

‘ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನೇ ಬಯಸುತ್ತಾರೆ’

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸ್ವಪಕ್ಷದ ವರಿಷ್ಠರ ವಿರುದ್ಧವೇ ಗುಡುಗಿದ್ದಾರೆ. ವರಿಷ್ಠರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಲ್ಲ ದುರ್ಬಲ ಮುಖ್ಯಮಂತ್ರಿಯನ್ನೇ ಬಯಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವದ ವಿರುದ್ದವೇ ಸಿಂಗ್ ಸಿಧು ಕಿಡಿ ಕಾರಿದ್ದಾರೆ.

ಪಂಜಾಬ್​​ನಲ್ಲಿ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಹೈಕಮಾಂಡ್​​ ಘೋಷಿಸಲು ಅಣಿಯಾಗಿರುವಂತೆಯೇ ಸಿಧು ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮುಂದುವರೆದು, ಉತ್ತಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಪಂಜಾಬ್ ಮತದಾರರ ಕೈಯಲ್ಲಿದೆ ಎಂದು ಸಿಧು ಹೇಳಿದ್ದಾರೆ.ಸಿಧು ಅವರ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Exit mobile version