Site icon PowerTV

‘ಕೈ’ ವಿರುದ್ಧ ಕೇಜ್ರಿವಾಲ್​​ ಕಿಡಿ

ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ನಾಯಕರು ಪರಸ್ಪರ ಕೆಸರೆರೆಚಾಟ ನಡೆಸುತ್ತಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಅವರು ‘ಚೋಟಾ ಮೋದಿʼ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣ್​​​​ದೀಪ್‌ ಸಿಂಗ್‌ ಸುರ್ಜೇವಾಲ ಟೀಕಿಸಿದ್ದರು.

ಟೀಕೆಗೆ ಕೇಜ್ರಿವಾಲ್‌ ಪ್ರತಿದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಸರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ ಎಂದು ಕೇಜ್ರಿವಾಲ್‌ ಚಾಟಿ ಬೀಸಿದ್ದಾರೆ. ಕನಸಿನಲ್ಲೂ ಸುರ್ಜೇವಾಲ ಅವರು ನನ್ನನ್ನು ದೆವ್ವದಂತೆ ಕಾಣುತ್ತಾರೆ. ದಿನದ 24 ಗಂಟೆಯೂ ನಾನು ಅವರ ಮನಸ್ಸಿನಲ್ಲಿದ್ದೇನೆ. ಅವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

Exit mobile version