Site icon PowerTV

ನಾನು ನೀತಿ ಪಾಠ ಕಲಿಯುವ ಅವಶ್ಯಕತೆಯಿಲ್ಲ : ಎಂಪಿ ರೇಣುಕಾಚಾರ್ಯ

ಶಾಸಕಾಂಗ ಪಕ್ಷದ ಸಭೆಯಲೂ ಕೆಲ ಸಚಿವರ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ ಇವರಿಂದ ನಾನು ನೀತಿ ಪಾಠ ಕಲಿಯುವ ಅವಶ್ಯಕತೆಯಿಲ್ಲ. ಅವರು ಒಂದು ಬಾರಿ ಮಂತ್ರಿಗಿರಿ ಬಿಟ್ಟು ಬಂದು ಮಾತಾಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು ಯಾವ ಸಚಿವರು ಎಂದು ಹೇಳಲಿ ಎಂದ ಸಚಿವ ಬಿಸಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದರು. ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು. ಯಾವ ಸಚಿವರು ಸ್ಪಂದಿಸಿಲ್ಲವೋ ಆ ಸಚಿವರ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದರು.

ಸೋಮವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆ ಸಂದರ್ಭದಲ್ಲಿ ನಾನು ನೂರಕ್ಕೆ ನೂರರಷ್ಟು ಸಚಿವರ ಬಗ್ಗೆ ಹೇಳಿಯೇ ಹೇಳುತ್ತೇನೆ. ಸಚಿವರ ಕಾರ್ಯವೈಖರಿ ವರಿಷ್ಠರ ಗಮನಕ್ಕೆ ತರ್ತೇನೆ ಎಂದರು.

Exit mobile version